ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಪಂಚಾಯತ್​ ರಾಜ್​ ದಿನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ವಿವಿಧ ಯೊಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು. ತಾಪಂ ಇಒ ರಮೇಶ ಸುಲ್ಫಿ, ಮಹ್ಮದ್​ ಸಲೀಂ, ಸಂಜುಕುಮಾರ ಕಾಂಗೆ, ಅರುಣಕುಮಾರ ಪಾಟೀಲ್​, ಪಿಡಿಒ ಚಂದ್ರಾಮ ಇದ್ದರು. 
ರಾಜ್ಯ

ಸಮಸ್ಯೆಮುಕ್ತ ಗ್ರಾಮಕ್ಕೆ ಶ್ರಮಿಸೋಣ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ರಮೇಶ ಸುಲ್ಫಿ ಕರೆ
  • ರಾಷ್ಟ್ರೀಯ ಪಂಚಾಯತ್​ ರಾಜ್​ ದಿನಾಚರಣೆ
ಬಸವಕಲ್ಯಾಣ: ಸರ್ಕಾರದ ಯೋಜನೆಗಳು ಗ್ರಾಮೀಣ ಜನರಿಗೆ ಮುಟ್ಟಿಸುವಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಪ್ರತಿಯೊಬ್ಬ ನೌಕರನ ಪಾತ್ರ ಮತ್ತು ಜವಾಬ್ದಾರಿ ಮಹತ್ವದ್ದಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಫಿ ಹೇಳಿದರು.
ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಪಂಚಾಯತ್​ ರಾಜ್​ ದಿನ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಸಿಬ್ಬಂದಿ ಸನ್ಮಾನ ಮತ್ತು ಪ್ರಶಂಸನಾ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗ ಅಭಿವೃದ್ಧಿ ಜತೆಗೆ ಸಮಸೆ ಮುಕ್ತ ಗ್ರಾಮವನ್ನಾಗಿಸಲು ಎಲ್ಲರೂ ಸೇರಿ ಶ್ರಮೀಸೋಣ ಎಂದು ಕರೆ ನೀಡಿದರು.
ಗ್ರಾಪಂ ಹಾಗೂ ತಾಪಂ ಕಚೇರಿ ಸಿಬ್ಬಂದಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದಾಗಲೇ ಮೇಲಧಿಕಾರಿಗಳಿಗೆ ಒಳ್ಳೆಯ ಹೆಸರು ಬರಲು ಸಾಧ್ಯ. ಈ ನಿಟ್ಟಿನಲ್ಲಿ ಕರವಸೂಲಿ ಸೇರಿ ವಿವಿಧ ಯೋಜನೆಗಳ ಪ್ರಗತಿಗಾಗಿ ಸಿಬ್ಬಂದಿ ಶ್ರಮಿಸಿದ್ದರಿಂದ ಪ್ರಶಂಸೆಗೆ ಪಾತ್ರರಾಗಲು ಸಾಧ್ಯವಾಗಿದೆ. ಬೇರೆಯವರಿಗೂ ಪ್ರೇರಣೆಯಾಗಲು ಗೌರವ ಸನ್ಮಾನ ಮತ್ತು ಪ್ರಶಂಶನಾ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಪಂ ಎಡಿ ಮಹ್ಮದ್​ ಸಲೀಂ ಮಾತನಾಡಿ, ಇಲಾಖೆಯಲ್ಲಿರುವ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಬೇರೆಯವರಿಗೆ ಪ್ರೇರಣೆಗಾಗಿ ಕೆಲವರನ್ನು ಮಾತ್ರ ಸನ್ಮಾನಿಸುವ ಮೂಲಕ ಗೌರವಿಸಲಾಗುತ್ತಿದೆ ಎಂದರು.
ತಾಲೂಕು ಯೋಜನಾಧಿಕಾರಿ ಸಂಜುಕುಮಾರ ಕಾಂಗೆ, ತಾಪಂ ಎಡಿ (ಪಂ.ರಾ) ಅರುಣಕುಮಾರ ಪಾಟೀಲ್​, ಪಿಡಿಒ ಚಂದ್ರಾಮ ಮಾತನಾಡಿದರು ತಾಪಂ ವ್ಯವಸ್ಥಾಪಕ ರಾಜರೆಡ್ಡಿ ಪಾಟೀಲ್​, ಐಇಸಿ ಸಂಯೋಜಕ ವೀರಾರೆಡ್ಡಿ ಇತರರಿದ್ದರು. ಪಿಡಿಒ ಅರ್ಜುನ ಶಿಂಧೆ ನಿರೂಪಣೆ ಮಾಡಿದರು. ಟಿಸಿ ಶಿವರಾಜ ಪಾಟೀಲ್​ ವಂದಿಸಿದರು.