ಮನ್ನಾಎಖೇಳ್ಳಿ ರಸ್ತೆ ಬಾಪೂರ ಕ್ರಾಸ್ ಹತ್ತಿರದ ಬೀದರ್ ದಣ ೇತ್ರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಕಾಗಿ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರನ್ನು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸನ್ಮಾನಿಸಿ ಗೌರವಿಸಿದರು. ಗುರುನಾಥ ರಾಜಗೀರ ಬಗದಲ್, ಸಂಜುಕುಮಾರ ಕೋಳಿ ಇತರರಿದ್ದರು.
ಚಿಟಗುಪ್ಪ : ನಾವು ಎಲ್ಲರೂ ಬಿಜೆಪಿ ತತ್ವ&ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜನಸೇವೆ ಮಾಡುವುದರ ಮೂಲಕ ಪವನ್ನು ಇನ್ನಷ್ಟು ಬಲಪಡಿಸಬೇಕು. ಬೀದರ್ ದಣ ೇತ್ರದಲ್ಲಿ ಪವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಸಂಕಲ್ಪ ಮಾಡೋಣ ಎಂದು ಬೀದರ್ ದಣ ೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಣ ೇತ್ರದ ವ್ಯಾಪ್ತಿಯ ತಾಲೂಕಿನ ಮನ್ನಾಎಖೇಳ್ಳಿ ರಸ್ತೆ ಬಾಪುರ ಕ್ರಾಸ್ ಹತ್ತಿರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿ ಮಾತನಾಡಿದ ಅವರು, ಸಮಾಜದ ಅತೀ ಹಿಂದುಳಿದ ವರ್ಗಗಳ ಉನ್ನತಿಗಾಗಿ, ರಾಷ್ಟ್ರೀಯತೆಯ ಭಾವನೆ ಬಲಪಡಿಸುವುದು, ಸುಶಾಸನ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು ಪದ ಮುಖ್ಯ ಧ್ಯೇಯಗಳಾಗಿವೆ. ಈ ಸಿದ್ಧಾಂತಗಳು ನಮ್ಮ ಕಾರ್ಯಕರ್ತರಿಗೆ ದಾರಿದೀಪವಾಗಿದ್ದು, ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಬದ್ಧತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
ಇಂದು ನಾವು ಭಾರತೀಯ ಜನತಾ ಪದ ಸಿದ್ಧಾಂತಗಳನ್ನು ಸ್ಮರಿಸುವ ಈ ಮಹತ್ವದ ಣದಲ್ಲಿ ಒಂದಾಗಿ ಸೇರಿದ್ದೇವೆ. ಬಿಜೆಪಿ ಎಂದರೆ ಕೇವಲ ಒಂದು ರಾಜಕೀಯ ಪವಲ್ಲ, ಇದು ದೇಶಭಕ್ತಿ, ಸೇವಾಭಾವನೆ ಮತ್ತು ಸಮರ್ಪಣೆಯ ಪ್ರತಿಕವಾಗಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯ ಗುರುನಾಥ ರಾಜಗೀರ ಬಗದಲ್, ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಕೋಳಿ, ಮುಖಂಡರಾದ ರಾಜರಡ್ಡಿ, ಸುರೇಶ ಮಾಶೆಟ್ಟಿ, ಪ್ರಭು ಮೆಂಗಾ, ಶ್ರೀನಿವಾಸ ಪೊದ್ದಾರ, ಮಾಣಿಕಪ್ಪ ಖಾಶೆಂಪುರ, ಶಿವಕುಮಾರ ಸ್ವಾಮಿ, ಬಾಬುರಾವ ಮಲ್ಕಾಪುರ, ಬಸವರಾಜ ಪವಾರ್, ಹೇಮಾ ತುಕ್ಕಾರೆಡ್ಡಿ, ಸಂತೋಷಿ ನಿಡವಂಚಾಇತರರಿದ್ದರು. ಪದ ಹಿರಿಯ ಮುಖಂಡರಾದ ಬಸವರಾಜ ಸಿಂಧೋಲ, ಜರೆಪ್ಪ ಹಂದಿಕೇರಿ, ರಾಜಕುಮಾರ ಮಾಳಗಿ, ದಯಾನಂದ ರೆಡ್ಡಿ ಬರೂರ, ನರಸಣ್ಣ ಔರಾದ್ ಅವರನ್ನು ಸನ್ಮಾನಿಸಲಾಯಿತು.