Let's prepare children for a competitive world
ಚಿಕ್ಕನಾಯಕನಹಳ್ಳಿ: -ಮಕ್ಕಳಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸತಿಕ ಚಟುವಟಿಕೆಗಳನ್ನು ಬೆಳೆಸಿದರೆ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಹೊರವಲಯದ ಮೇಲನಹಳ್ಳಿಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಾತ್ಮಕವಾಗಿವೆ. ಅದ್ದರಿಂದ ಮಕ್ಕಳಲ್ಲಿ ಕೇವಲ ಶಿಕ್ಷಣಕ್ಕಾಗಿ ಒತ್ತು ನೀಡದೇ ಮಕ್ಕಳಲ್ಲಿರುವ ಇತರೆ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ತಹಸೀಲ್ದಾರ್ ಮಮತಾ ಮಾತನಾಡಿ, ಮಕ್ಕಳು ಹೆಚ್ಚು ಅದ್ಯಯನದತ್ತ ಮುಖಮಾಡಬೇಕೆ ಹೊರತು ಮೊಬೈಲ್ ಬಳೆಕೆೆಯನ್ನು ಕಡಿಮೆ ಮಾಡಬೇಕು. ಗುಣಾತ್ಮಕ ಶಿಕ್ಷಣವನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಸಾದನೆ ಮಾಡಬೇಕು ಎಂದು ತಿಳಿಸಿದರು.
ಬಿಇಒ ಕಾಂತರಾಜು ಮಾತನಾಡಿ, ವಸತಿಶಾಲೆಗಳಲ್ಲಿ ಉತ್ತಮವಾದ ಶಿಕ್ಷಣವನ್ನು ನೀಡಲಾಗುತ್ತಿದೆ. ಗುಣಾತ್ಮಕ ಹಾಗೂ ಮೌಲ್ಯಯುತವಾದ ಶಿಕ್ಷಣದೊಂದಿಗೆ ಮಕ್ಕಳಲ್ಲಿ ಸಂಸತಿ, ಸಂಸ್ಕಾರವನ್ನು ಬೆಳೆಸಲಾಗುತ್ತಿದೆ ಎಂದರು.
ಪ್ರಾಂಶುಪಾಲ ಕೆ.ಎನ್.ಸತೀಶ್ ಮಾತನಾಡಿ, ಶಾರದಾ ಪೂಜೆಯನ್ನು ಹಾಗೂ ಈ ವರ್ಷದ ವಾರ್ಷಿಕೋತ್ಸವವನ್ನು ಕಲಾ ಸೌರಭ ಎಂಬ ಹೆಸರಿನಿಂದ ಆಚರಣೆ ಮಾಡುತ್ತಿದ್ದು, ಮಕ್ಕಳ ಪ್ರತಿಭೆಯನ್ನು ಈ ಮೂಲಕ ಗುರುತಿಸಲಾಗುತ್ತದೆ ಎಂದರು.
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.