ಮಕ್ಕಳಿಗೆ ಸಂಸತಿ ಧಾರೆ ಎರೆಯೋಣ children
ಕೆಜಿಎಫ್: ನಮ್ಮ ದೇಶವನ್ನು ಇತರೆ ದೇಶಗಳು ಗೌರವದಿಂದ ಕಾಣುತ್ತವೆ. ಇದು ನೆಲದ ಸಂಸತಿಯಿಂದ ಸಾಧ್ಯವಾಗಿದೆ. ಇಂತಹ ಸಂಸತಿಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಕೆಲಸ ಮಾಡಬೇಕಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾಪನ ಪೀಠದ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.children
ನಗರದ ಪ್ರಸನ್ನ ಲಕ್ಷಿ$್ಮವೆಂಕಟೇಶ್ವರಸ್ವಾಮಿ ದೇವಾಲಯದ 91ನೇ ಬ್ರಹ್ಮರಥೋತ್ಸವದ ಪ್ರಯುಕ್ತ ಒಕ್ಕಲಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ಹನುಮಂತ್ಯುತ್ಸವದಲ್ಲಿ ಮಾತನಾಡಿ, ಜಾತ್ರೆ, ರಥೋತ್ಸವ, ರೈತ ಸಮುದಾಯಕ್ಕೆ ಹರ್ಷ ಉಂಟುಮಾಡಲಿವೆ. ಹಿಂದು ಸಮಾಜದ ಏಳಿಗೆಗೆ ತಮ್ಮ ಸ್ವಾರ್ಥ ಬಿಟ್ಟು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ನೀವು ರಸ್ತೆಯಲ್ಲಿ ತೆಗೆದುಕೊಂಡು ಬಂದ ಜ್ಯೋತಿ ಕೇವಲ ಎಣ್ಣೆ ಮತ್ತು ಬತ್ತಿಯಲ್ಲ. ಅದು ಜ್ಞಾನ ಜ್ಯೋತಿ. ನಿಮ್ಮ ಕುಟುಂಬ ಮತ್ತು ಅಂತರರಂಗ ಶುದ್ಧೀಕರಣಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಕುಣಿಗಲ್ ಮಠದ ಸಿದ್ದೇಶ್ವರ ಚೈತನ್ಯ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಗೋಮಾತೆ, ಭೂಮಾತೆಯರ ಮೇಲೆ ಪ್ರತಿಯೊಬ್ಬರೂ ಅವಲಂಬಿತರಾಗಿದ್ದೇವೆ. ಹಣ, ಐಶ್ವರ್ಯ ಶಾಶ್ವತವಲ್ಲ. ಭಾರತ ನಾರಿ ದೇವತೆಗಳಿಗೆ ಸಮಾನ. ನಾವು ಮೊದಲು ಮಹಿಳೆಯರನ್ನು ಗೌರವಿಸುವುದನ್ನು ಕಲಿಯಬೇಕು. ಪ್ರತಿಯೊಬ್ಬರೂ ಮನೆಯಲ್ಲಿ ಸ್ವಚ್ಛತೆ ಕಾಪಾಡಬೆಕು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ ಎಂದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ತಮ್ಮ ಮಕ್ಕಳನ್ನು ಧರ್ಮ ಮಾರ್ಗದಲ್ಲಿ ನಡೆಸಬೇಕು. ಮನೆಗೆ ಬಂದ ಅತಿಥಿಗಳನ್ನು ಗೌರವಿಸವ ಸಂಸತಿಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಇಂದಿನ ವಿದ್ಯುನ್ಮಾನ ಯುಗದಲ್ಲಿ ನಮ್ಮ ಸಂಸತಿ ಮರೆಯುತ್ತಿದ್ದೇವೆ. ಎಲ್ಲ ತಂದೆ ತಾಯಿಗಳು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಹಿಂದೂ ಸಂಪ್ರದಾಯ ಬೆಳಸಲು ಸಲಹೆ ನೀಡಬೇಕೆಂದು ಹೇಳಿದರು.
ಒಕ್ಕಲಿಗ ಸಮುದಾಯದ ಜಿಲ್ಲಾಧ್ಯಕ್ಷ ಕೆ.ವಿ.ಶಂಕರಪ್ಪ, ತಾಲೂಕು ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಗೌರವಾಧ್ಯಕ್ಷ ಚಂದ್ರಶೇಖರ್ ರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್, ಸುರೇಶ್ಗೌಡ, ಮಾಣಿಕ್ಯಂ ಬಸಪ್ಪ, ಆಂಜನೇಯಗೌಡ, ವಕೀಲ ವೆಂಕಟರಾಮಯ್ಯ, ನಿವೃತ್ತ ಡಿ.ಸಿ.ಶ್ರೀರಾಮಪ್ಪ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷಿ$್ಮನಾರಾಯಣ ಇದ್ದರು.