ಸುರೇಬಾನ ಮನಿಹಾಳ ಗ್ರಾಮದ ಗುರುದೇವ ಆತ್ಮಾನಂದಮಠದಲ್ಲಿ ಹಮ್ಮಿಕೊಂಡಿದ್ದ ನವಜೀವನೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ, ಎಚ್​.ಆರ್​.ಲವಕುಮಾರ, ಅಶೋಕ ಕುಲಗೋಡ, ಜಿ.ಬಿ.ರಂಗನಗೌಡ್ರ ಇತರರಿದ್ದರು. 
ರಾಜ್ಯ

ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ರಾಮದುರ್ಗ: ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ಬೇಸರದ ಸಂಗತಿ. ಹೀಗಾಗಿ, ದುಶ್ಚಟದಿಂದ ಹೊರಬಂದ ಯುವಕರು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸ್ಥಳಿಯ ಗುರುದೇವ ಆತ್ಮಾನಂದ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಸುರೇಬಾನ ಮನಿಹಾಳ ಗ್ರಾಮದ ಗುರುದೇವ ಆತ್ಮಾನಂದ ಮಠದಲ್ಲಿ ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈಚೆಗೆ ಹಮ್ಮಿಕೊಂಡಿದ್ದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂಸ್ಥೆ ಜಿಲ್ಲಾ ನಿರ್ದೇಶಕ ಎಚ್​.ಆರ್​.ಲವಕುಮಾರ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಅಶೋಕ ಕುಲಗೋಡ, ಸದಸ್ಯರಾದ ಜಿ.ಬಿ.ರಂಗನಗೌಡ್ರ, ರಮೇಶ ಜಲಗೇರಿ, ದಯಾನಂದ ಶಿರೂರು, ಮೇಲ್ವಿಚಾರಕ ಪ್ರದಿಪ ಇತರರಿದ್ದರು. ಯೋಜನಾಧಿಕಾರಿ ಸಚಿನ ಸ್ವಾಗತಿಸಿದರು. ಕುಮಾರ ನಿರೂಪಿಸಿದರು. ಮೇಲ್ವಿಚಾರಕ ಮಂಜಪ್ಪ ವಂದಿಸಿದರು.