ಭಿನ್ನಾಭಿಪ್ರಾಯ ಮರೆತು ಹೋರಾಡೋಣ fight 
ರಾಜ್ಯ

ಭಿನ್ನಾಭಿಪ್ರಾಯ ಮರೆತು ಹೋರಾಡೋಣ fight

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಕೆಜಿಫ್​​ ಚಿದ್ದದ ಗಣಿ ಮುಚ್ಚಿ 26 ವರ್ಷ
  • ಕರಾಳ ದಿನ ಆಚರಿಸಿದ ಸಂತ್ರಸ್ತರು
ಕೆಜಿಎಫ್:ಚಿನ್ನದ ಗಣಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಲಭಿಸಬೇಕಾದರೆ ಎಲ್ಲ ಪಕ್ಷಗಳ ಮುಖಂಡರು ಭಿನ್ನಾಭಿಪ್ರಾಯ ಬದಿಗೊತ್ತಿ ಹೋರಾಟದಲ್ಲಿ ಭಾಗವಹಿಸಿದರೆ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಮಾಜಿ ಶಾಸಕ ಎಸ್​. ರಾಜೇಂದ್ರನ್​ ಕರೆ ನೀಡಿದರು. fight
ಕೆಜಿಎಫ್​ ಚಿನ್ನದ ಗಣಿ ಮುಚ್ಚಿ 26 ವರ್ಷ ಕಳೆದ ಹಿನ್ನೆಲೆಯಲ್ಲಿ ಸೇವ್​ ಕಮಿಟಿ ಸದಸ್ಯರು ಕಪು$್ಪ ಬಾವುಟ ಹಿಡಿದು ಚಿನ್ನದ ಗಣಿಗಳ ಪ್ರದೇಶದಲ್ಲಿ ಬ್ಲಾಕ್​ ಡೇ ಆಚರಿಸಿ ಮಾತನಾಡಿದರು.
26 ವರ್ಷ ಕಳೆದರೂ ಸಾರ್ವಜನಿಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಬ್ಲಾಕ್​ ಡೇ ಆಚರಿಸಲಾಗುತ್ತಿದೆ. ಕೆಜಿಎಫ್​ ಕ್ಷೇತ್ರದಲ್ಲಿ ಕುಡಿಯುವುದಕ್ಕೆ ಶುದ್ಧ ನೀರು ಇಲ್ಲ. ಬಿಜಿಎಂಎಲ್​ ಭಾಗದಲ್ಲಿ ಕಾರ್ಮಿಕರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಮಹಿಳೆಯರಿಗೆ ಶೌಚಗೃಹವಿಲ್ಲ, ಕುಡಿಯುವ ನೀರಿಲ್ಲ, ನಿವೃತ್ತಿ ಹಣ ಬಂದಿಲ್ಲ. ಕಾರ್ಮಿಕರಿಗೆ ವಾಸ ಮಾಡಲು ಯೋಗ್ಯ ಮನೆಯಿಲ್ಲ ಎಂದರು.
ಸೇವ್​ ಕೆಜಿಎಫ್​ ಅಧ್ಯಕ್ಷ ಜ್ಯೋತಿಬಸು ಮಾತನಾಡಿ, ಶಾಸಕಿ ರೂಪಕಲಾ ಬಿಜಿಎಂಎಲ್​ ಕಾರ್ಮಿಕರ ಸಮಸ್ಯೆ ಬಗ್ಗೆ ಒಮ್ಮೆಯೂ ಸದನದಲ್ಲಿ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದರು.
ಸೇವ್​ ಕಮಿಟಿಯ ಕಾರ್ಯದರ್ಶಿ ಪಿ. ದಯಾನಂದ್​ ಮಾತನಾಡಿ, ದೇಶದಲ್ಲಿ ಬಯಲು ಶೌಚಮುಕ್ತವಾಗಿದ್ದು, ಕೆಜಿಎಫ್​ ನಗರದಲ್ಲಿ ಈಗಲೂ ಮಹಿಳೆಯರು ಬಯಲು ಶೌಚವನ್ನೇ ಅವಲಂಭಿಸಿದ್ದಾರೆ. ಇದು ದುರಂತವೇ ಸರಿ ಎಂದರು.
ನಗರ ಸಮಸ್ಯೆ ಸರ್ಕಾರದ ಗಮನಕ್ಕೆ ತರಲು ಕೆಜಿಎಫ್​ ಸೇವ್​ ಕಮಿಟಿ ಸದಸ್ಯರು ಕಪು$್ಪ ಬಟ್ಟೆ ಧರಿಸಿ ಮೈಸೂರು ಚಿನ್ನದ ಗಣಿ ಪ್ರದೇಶದಿಂದ ಚಾಂಪಿಯನ್​ರೀಫ್ಸ್​, ಆಂಡ್ರಸನ್​ಪೇಟೆ, ಫೈವ್​ಲೈಟ್ಸ್​ ವೃತ್ತದ ಮಾರ್ಗವಾಗಿ ಬಿಜಿಎಂಎಲ್​ ವ್ಯಾಪ್ತಿಯ 16 ವಾರ್ಡ್​ಗಳಲ್ಲಿ ಬೈಕ್​ ರ್ಯಾಲಿ ಮೂಲಕ ಬ್ಲಾಕ್​ ಡೇ ಆಚರಿಸಿದರು.