ಆದರ್ಶಗಳನ್ನು ಪಾಲಿಸೋಣ ideals 
ರಾಜ್ಯ

ಆದರ್ಶಗಳನ್ನು ಪಾಲಿಸೋಣ ideals

ಕೋಲಾರ ಡೆಸ್ಕ್
ಮುಳಬಾಗಿಲು: ನಗರದ ಮುತ್ಯಾಲಪೇಟೆಯ ಕೆ.ಬೈಯಪ್ಪಲ್ಲಿ ರಸ್ತೆಯ ತರಕಾರಿ ಮಾರುಕಟ್ಟೆ ವೃತ್ತದಲ್ಲಿ ಶ್ರೀ ಭುವನೇಶ್ವರಿ ಆಟೋ ನಿಲ್ದಾಣ ಹಾಗೂ ಶ್ರೀರಾಮ ಗೆಳೆಯರ ಬಳಗದಿಂದ ಶುಕ್ರವಾರ ರಾಮನವಮಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ideals
ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಬಳಿಕ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ಹಾಗೂ ಪ್ರಸಾದ ವಿತರಿಸಲಾಯಿತು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಶಂಕರ್​ ಕೇಸರಿ ಮಾತನಾಡಿ, ಚೈತ್ರಮಾಸ, ಶುಕ್ಲಪಕ್ಷದ 9ನೇ ದಿನ ಶ್ರೀರಾಮ ಜನಿಸಿದ. ಪ್ರತಿಯೊಬ್ಬರೂ ರಾಮನ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಹಿತಕ್ಕಾಗಿ ಶ್ರಮಿಸೋಣ. ಪ್ರಭುವಿನ ಅನುಗ್ರಹದಿಂದ ಎಲ್ಲೆಡೆ ಸುಖ, ಶಾಂತಿ ನೆಲೆಸಲಿ. ಪ್ರಸ್ತುತ ತೀವ್ರ ಬಿಸಿಲಿನಿಂದ ಜನ ಬಳಲುತ್ತಿದ್ದು, ಮಳೆಯಿಂದ ಭೂಮಿ ಹಸಿರಾಗಲಿ ಎಂದರು.
ನಗರ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಅಣ್ಣಯ್ಯ, ಆಟೋ ಮಂಜುನಾಥ್​, ಚಲಪತಿ, ವಕೀಲ ವಿ.ಜಯಪ್ಪ, ಶಾಪೂರು ಎಸ್​.ಆರ್​.ಶ್ರೀಧರ್​, ನಗರಸಭೆಯ ನೋಡಲ್​ ಇಂಜಿನಿಯರ್​ ಐ.ಸುನಿಲ್​ ರಾಜ್​, ಜನೌಷಧಿ ಕೇಂದ್ರದ ಗೀತಾ, ಜೆಮಿನಿ ಸ್ಟುಡಿಯೋ ಹರ್ಷ, ಆಟೋ ಚಾಲಕರಾದ ಮುನಿರತ್ನ, ಶಂಕರಪ್ಪ, ವೆಂಕಟರಾಮ, ಶಂಕರರೆಡ್ಡಿ, ರಾಮು, ಪ್ರಕಾಶ್​, ಗಣೇಶ್​, ಅಪ್ಪಿ ಇದ್ದರು.