ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಪ್ಪರದಕಲ್ಲು ಬಳಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜೆಡಿಎಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ, ವಿಜಯಪುರ ಹೋಬಳಿ ಅಧ್ಯಕ್ಷ ಪುರ ಕೃಷ್ಣಪ್ಪ ಇದ್ದರು.
ಕುಂದಾಣ : ಕಾಂಗ್ರೆಸ್ ವೈಫಲ್ಯ ಮುಂದಿಟ್ಟುಕೊಂಡು ಜನರ ಮನೆ ಬಾಗಿಲಿಗೆ ತೆರಳಿ ಅವರ ಕುಂದು ಕೊರತೆಗಳನ್ನು ಆಲಿಸುವುದಲ್ಲದೆ ಸ್ಥಳಿಯರ ಅಭಿವೃದ್ಧಿಗೆ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಪ್ಪರದಕಲ್ಲು ಬಳಿಯ ಮನ್ವಂತರಿ ಪಾರ್ಟಿಹಾಲ್ನಲ್ಲಿ ಬುಧವಾರ ಜೆಡಿಎಸ್ನಿಂದ ಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಪರಿಷ್ಕರಣೆರ ಬಿಪಿಎಲ್ 2 ಕಾರ್ಯಾಗಾರದಲ್ಲಿ ಮಾತನಾಡಿದರು. ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಚುನಾವಣೆಗೆ ಸಜ್ಜುಗೊಳ್ಳಬೇಕು. ಹಾಗಾಗಿ ವರಿಷ್ಠರ ಆದೇಶದಂತೆ ತಾಲೂಕಿನ ಎಲ್ಲ ಬೂತ್ಮಟ್ಟದ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಚುನಾವಣಾ ಸಿದ್ಧತಾ ಸಮಗ್ರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿನ ವೈಗಳ ಬಗ್ಗೆ ಎಚ್ಚರ ವಹಿಸಬೇಕು. ಈ ಹಿಂದೆ ಕೆಲ ಚುನಾವಣೆಗಳಲ್ಲಿ ಒಂದೇ ಮತದಲ್ಲಿ ಪರಾಭಾವಗೊಂಡ ಸ್ಥಿತಿಗಳನ್ನು ಎದುರಿಸಿದ್ದೇವೆ. ಕ್ಷೇತ್ರದ 294 ಬೂತ್ಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಎಚ್.ಎನ್. ದೇವರಾಜ್ ಮಾತನಾಡಿ, ಚುನಾವಣಾ ಆಯೋಗದ ನಿಬಂಧನೆಗಳಿಗೆ ಕೈಗೊಳ್ಳಬಹುದಾದ ಮುಂಜಾಗ್ರತೆ ಹಾಗೂ ಮತದಾರರಲ್ಲಿ ಬರುವ ಗೊಂದಲಗಳಿಗೆ ಎಚ್ಚೆತ್ತು, ಅಗತ್ಯ ಸಿದ್ಧತೆ ಪಡೆದುಕೊಳ್ಳುವ ಬಗ್ಗೆ ಬೂತ್ ಕಮಿಟಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಯುವ ಜೆಡಿಎಸ್ ಮುಖಂಡ ಹೊಸಹಳ್ಳಿ ರವಿಕುಮಾರ್, ಹಿರಿಯ ಮುಖಂಡರಾದ ಗುರ್ರಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್, ಬೂತ್ ಕಮಿಟಿ ಪದಾಧಿಕಾರಿಗಳಾದ ರಾಮಾಂಜಿನೇಯದಾಸ್, ತೆಲೂಹಳ್ಳಿ ಶಿವಾನಂದ್, ಸೂಲಕುಂಟೆ ಜಗದೀಶ್, ರೆಡ್ಡಹಳ್ಳಿ ಚೇತನ್ ಗೌಡ, ಹಂದ್ರಹಳ್ಳಿ ಬಾಬು, ಕೆಂಪತಿಮ್ಮನಹಳ್ಳಿ ಆನಂದ್ ಇತರರು ಇದ್ದರು.