ಗುರಮಠಕಲ್​ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಂಗವಿಕಲರಿಗೆ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸಲಾಯಿತು. ವೈದ್ಯಾಧಿಕಾರಿ ಡಾ.ಮಹೇಶ ಸಜ್ಜನ್​ ಇತರರಿದ್ದರು. 
ರಾಜ್ಯ

ಸ್ವಾವಲಂಭಿ ಜೀವನಕ್ಕೆ ಸಹಕರಿಸೋಣ

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಧಿಕಾರಿ ಡಾ.ಮಹೇಶ ಸಲಹೆ
  • ಅಂಗವಿಕಲರಿಗೆ ಉದ್ಯಮಶೀಲತಾ ತರಬೇತಿ
ಗುರುಮಠಕಲ್​: ಅಂಗವಿಕಲರ ಸ್ವಾವಲಂಬಿ ಜೀವನಕ್ಕಾಗಿ ಎಲ್ಲರ ಸಹಕಾರ ಬಹಳ ಮುಖ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸೋಣ ಎಂದು ವೈದ್ಯಾಧಿಕಾರಿ ಡಾ.ಮಹೇಶ ಸಜ್ಜನ್​ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕಿನ ಅಂಗವಿಕಲರಿಗಾಗಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 12 ದಿನಗಳ ಪೇಪರ್​ ಬ್ಯಾಗ್​ ಮತ್ತು ಎನ್ವಲಪ್​ ಕವರ್​, ಫೈಲ್​ ತರಬೇತಿ ಸಮಾರೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಪಿಡಿ ಸಂಸ್ಥೆ ಜೀವನಚಕ್ರ ಯೋಜನೆ ಮುಖ್ಯಸ್ಥ ಮಧುಕೇಶವ ಮಾತನಾಡಿ, ಮಾರುಕಟ್ಟೆ ಸ್ಥಿರತೆಯನ್ನು ಅರಿತು ತಮ್ಮ ಸ್ವಾವಲಂಬಿ ಜೀವನವನ್ನು ಮನ್ನಡೆಸಲು ಸಂಸ್ಥೆಯಿಂದ ಸಹಕಾರ ನೀಡಲು ಸದಾಸಿದ್ಧ ಎಂದು ಭರವಸೆ ನೀಡಿದರು.
ವಿವಿಧ ಗ್ರಾಮಗಳಿಂದ ಒಟ್ಟು 29 ಜನ ಅಂಗವಿಕಲರು ಭಾಗವಹಿಸಿದ್ದು, ತರಬೇತಿಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಮುಂಬರುವ ದಿನಗಳಲ್ಲಿ ಬ್ಯಾಂಕ್​ನಿಂದ ಸಹಕಾರ ನೀಡುವುದಾಗಿ ಹೇಳಿದರು.
ಜಿಲ್ಲಾ ಸಂಯೋಜಕ ಶಿವಯೋಗಪ್ಪ, ಸುರೇಶ್​ ಶಿಲ್ಪ ಎಂ, ಶಿಲ್ಪ ಎಸ್​, ಅಂಬಿಕಾ, ನಾಗಮಣಿ, ಅತೀಸ್​, ಶರಣಪ್ಪ, ಸಂಪನ್ಮೂಲ ವ್ಯಕ್ತಿ ಶಫೀಕ್​, ಎಪಿಡಿ ಸಂಸ್ಥೆ ತಾಲೂಕು ಸಂಯೋಜಕ ವಿರುಪಾ ಮಾಲಿ ಪಾಟೀಲ್​ ಇತರರಿದ್ದರು.