ಪೂರ್ವಿಕರ ಆಚಾರ ಮುಂದುವರಿಸೋಣ
ಮುಳಬಾಗಿಲು: ಎಲ್ಲರೂ ಒಂದೆಡೆ ಸೇರಿ ದೇವರ ಪೂಜೆ, ಹರಿಕಥೆ, ಭಜನೆ, ಸತ್ಸಂಗಗಳನ್ನು ನಮ್ಮ ಪೂರ್ವಿಕರು ಅನಾದಿ ಕಾಲದಿಂದಲೂ ಹಮ್ಮಿಕೊಂಡು ಬರುತ್ತಿರುವುದರಿಂದ ಗ್ರಾಮಗಳಲ್ಲಿ ಐಕ್ಯತೆ ಸಾಧ್ಯವಾಗಿದೆ. ಇಂತಹ ದೇವತಾ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಆವಣಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಆದಿನಾರಾಯಣ ತಿಳಿಸಿದರು. ancestors
ತಾಲೂಕಿನ ದಿನ್ನಹಳ್ಳಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ಶ್ರೀ ರಾಮಕೋಟಿ 39ನೇ ಸಪ್ತಾಹದಲ್ಲಿ ಮಾತನಾಡಿ, ಈ ಸಂಪ್ರದಾಯಗಳನ್ನು ದಿನ್ನಹಳ್ಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ. ಇದರಿಂದ ಮಕ್ಕಳು, ಯುವ ಜನಾಂಗ ಒಳ್ಳೆಯ ವಿಚಾರಧಾರೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಟಿಎಪಿಎಎಸ್ಎಂಎಸ್ ನಿರ್ದೇಶಕ ಹನುಮನಹಳ್ಳಿ ಸುಬ್ರಹ್ಮಣಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎಚ್.ಗೊಲ್ಲಹಳ್ಳಿ ಕೆ.ಸತೀಶ್, ಮುಖಂಡರಾದ ತಾವರೆಕೆರೆ ನಾರಾಯಣರೆಡ್ಡಿ, ಬಿಸನ್ನಹಳ್ಳಿ ಎನ್.ರಾಜಣ್ಣ, ದಿನ್ನಹಳ್ಳಿ ಎನ್.ತಮ್ಮಣ್ಣ ಇದ್ದರು.