ಶ್ರೀನಿವಾಸಪುರ ambedkar ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ, ಇಒ ಡಾ .ಕೆ ಸರ್ವೇಶ್​, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್​, ರೈತ ಮುಖಂಡ ಸಿ.ವಿ ಪ್ರಭಾಕರ ಗೌಡ, ನರಸಿಂಹ, ನಾರಾಯಣಸ್ವಾಮಿ, ಆನಂದ ಇದ್ದರು. 
ರಾಜ್ಯ

ಅಂಬೇಡ್ಕರ್​ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ ambedkar

ಶ್ರೀನಿವಾಸಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ನಮ್ಮ ambedkar ದೇಶಕ್ಕೆ ಸಂವಿಧಾನ ಎಂಬ ಮಹಾಗ್ರಂಥ ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಮುನ್ನಡೆಯಲು ಸೃಷ್ಟಿಕರ್ತರಾಗಿದ್ದು, ಇವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನ ವಿವಿಧ ಗ್ರಾಪಂಗಳಿಂದ ಅಂಬೇಡ್ಕರ್​ ಭಾವಚಿತ್ರದೊಂದಿಗೆ 13 ಪಲ್ಲಕ್ಕಿಗಳು ಬರಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ, ಡೋಲು ಕುಣಿತಾಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿಲಾಗವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್​ ರಾಜೇಶ್​, ಟಿಎಚ್​ಒ ಮಹಮ್ಮದ್​ ಷರೀಫ್​, ಪುರಸಭೆ ಮಾಜಿ ಅಧ್ಯಕ್ಷ ಭಾಸ್ಕರ್​, ತಾಪಂ ಮಾಜಿ ಸದಸ್ಯ ನರಸಿಂಹಯ್ಯ, ತಿಮ್ಮಯ್ಯ, ಮುಖಂಡ ಬದ್ರಿ ನರಸಿಂಹ, ರಾಮಂಜಿಮ್ಮ, ಹನುಮಂತಪ್ಪ ಈರಪ್ಪ, ವೆಂಕಟೇಶ್​, ಸಿ.ಮುನಿಯಪ್ಪ, ಮುದಿಮುಡಗು ವಾಸು, ಶಿಕ್ಷಕ ಚಲಪತಿ ಇದ್ದರು.