ಮ್ಯಾರಥಾನ್ ಓಟಕ್ಕೆ ಚಾಲನೆ ಹಸಿರು Marathon ನಿಶಾನೆ ತೋರುವ ಮೂಲಕ ಗಣ್ಯರು ಚಾಲನೆ ನೀಡಿದರು.
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಕರೆ
ಕೆಜಿಎಫ್: ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಲೈಂಗಿಕ ಶೋಷಣೆ ತಡೆಗೆ ಕಾನೂನು ಜಾರಿಗೊಳಿಸಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ರೋಟರಿ ಸಂಸ್ಥೆ ಮ್ಯಾರಥಾನ್ ಹಮ್ಮಿಕೊಂಡಿರುವುದು ಶ್ಲಾನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.
ತಾಲೂಕು ರೋಟರಿ ಸಂಸ್ಥೆಯಿಂದ ನಗರಸಭೆ ಮೈದಾನದಲ್ಲಿ ಫೋಕ್ಸೋ, ಮಕ್ಕಳ ಶೋಷಣೆ, ನಶೆಮುಕ್ತ ಕೆಜಿಎಫ್ ನಿರ್ಮಾಣಕ್ಕೆ ಹಮ್ಮಿಕೊಳ್ಳಲಾಗಿದ್ದ 10 ಕಿ.ಮೀ ಮ್ಯಾರಥಾನ್ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಾತ್ರವಲ್ಲದೇ ಹಲವೆಡೆ ಪೋಕ್ಸೋ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಇಂದಿಗೂ ಅನೇಕ ಸ್ಥಳಗಳಲ್ಲಿ ಪಾಲಕರಿಗೆ ಪೋಕ್ಸೋ ಕಾಯ್ದೆಯ ಅರಿವಿಲ್ಲದೇ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ. ಪಾಲಕರ ಉದ್ದೇಶ ಒಳ್ಳೆಯದೇ ಆಗಿದ್ದರೂ 18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡುವುದು ಕಾನೂನು ಬಾಹಿರ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಮಕ್ಕಳನ್ನು ಚೆನ್ನಾಗಿ ಓದಿಸಿ, ಸತಜೆಗಳನ್ನಾಗಿ ಮಾಡುವ ಜವಾಬ್ದಾರಿ ಎಲ್ಲ ಪಾಲಕರ ಮೇಲಿದೆ. ಇದನ್ನು ಉಲ್ಲಂಸಿದಲ್ಲಿ ಕಠಿಣ ಶಿೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು, ಡಿಜಿಟಲ್ ಮಾಧ್ಯಮಗಳ ಮೂಲಕವೂ ಲೈಂಗಿಕ ದೌರ್ಜನ್ಯವೆಸಗುವುದನ್ನು ಕಾಣಬಹುದಾಗಿದ್ದು, ಹದಿಹರೆಯದ ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಯಾರೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಲ್ಲಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಕೂಡಲೇ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಂತ್ರಸ್ತರಿಗೆ ರಕ್ಷಣೆ ಒದಗಿಸುತ್ತಾರೆ ಎಂದರು.
ಒಮ್ಮೆ ಮಾದಕ ವಸ್ತುಗಳ ಚಟಕ್ಕೆ ದಾಸರಾದರೇ ಅದರಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ತಲುಪುತ್ತಾರೆ. ಆದ್ದರಿಂದ ಯಾರೂ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಬಾರದು. ವಿದ್ಯಾರ್ಥಿಗಳು ಜೀವನದಲ್ಲಿ ಇದಕ್ಕೆ ದಾಸರಾದರೇ ಓದಲು, ಬರೆಯಲು ಹಾಗೂ ಬೇರೆ ಯಾವುದೇ ಕೆಲಸ ಮಾಡಲು ಮನಸ್ಸಾಗದ ಹಂತಕ್ಕೆ ಇದು ತೆಗೆದುಕೊಂಡು ಹೋಗುತ್ತದೆ. ಆಗ ಮಾದಕ ವಸ್ತು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಅಪರಾಧ ಮಾಡಲು ಪ್ರೇರೇಪಿಸುತ್ತಿದೆ ಎಂದರು.
ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಮೋಜಿಗಾಗಿ ಮಾದಕ ವಸ್ತುಗಳ ಸೇವನೆ ಆರಂಭಿಸಿದ ವ್ಯಕ್ತಿ ಅರಿವಿಲ್ಲದಂತೆ ಪದೇ ಪದೆ ಅದನ್ನು ಬಳಸಲು ಪ್ರಾರಂಭಿಸುತ್ತಾನೆ. ಏಕೆಂದರೆ ಅದು ಅವನಿಗೆ ಸಂತೋಷವನ್ನುಂಟುಮಾಡುತ್ತದೆ. ಅಲ್ಲದೇ ಅಹಿತಕರ ಅನುಭವಗಳ ಉಂಟು Marathon ಮಾಡುತ್ತದೆ. ಆದರೆ ಇದು ಕೇವಲ ತಾತ್ಕಾಲಿಕ ಅನುಭವವಾಗಿದ್ದು, ಸಮಯ ಕಳೆದಂತೆ ಚಟಕ್ಕೆ ತಿರುಗಿಬಿಡುತ್ತದೆ. ಆದರೆ ಈ ಪರಿವರ್ತನೆಯ ಸೂಚನೆಗಳನ್ನು ಮೊದಲೇ ಅರಿತುಕೊಂಡಲ್ಲಿ ಯಾವುದೇ ಒಬ್ಬ ವ್ಯಕ್ತಿ ಮಾದಕ ವಸ್ತುಗಳ ದಾಸನಾಗುವುದನ್ನು ತಡೆಗಟ್ಟಬಹುದಾಗಿದೆ ಎಂದರು.
ಕೆಜಿಎಫ್ ರೋಟರಿ ಕ್ಲಬ್ ಅಧ್ಯಕ್ಷ ಡಾ.ಕೆ.ಬಾಬು, ಖಜಾಂಚಿ ಆರ್.ಮಂಜುನಾಥಪ್ಪ, ಅ.ಮು.ಲಕ್ಷಿ$್ಮನಾರಾಯಣ, ಕಾರ್ಯದರ್ಶಿ ಉಮೇಶ್, ಖ್ಯಾತ ಹೃದಯತ ಡಾ.ರಾಜೇಂದ್ರಕುಮಾರ್, ಜಿಲ್ಲಾ ಶಸಚಿಕಿತ್ಸಕ ಡಾ.ಸುರೇಶ್ಕುಮಾರ್, ಎಪಿಎಂಸಿ ನಿರ್ದೇಶಕ ದಶರಥರೆಡ್ಡಿ, ಗೋಪಿ, ಪ್ರವಿಣ್, ಶ್ರೀನಿವಾಸ್ರೆಡ್ಡಿ, ರೋಟರಿ ಜಿಲ್ಲಾ ಪ್ರಾಂತಪಾಲ ಶ್ರೀಧರ್, ಪೂರ್ವ ನಿಯೋಜಿತ ರೋಟರಿ ಜಿಲ್ಲಾ ಪ್ರಾಂತಪಾಲ ಅನಿಲ್ಗುಪ್ತ, ಸಹಾಯಕ ಪ್ರಾಂತಪಾಲ ದೇವರಾಜ್, ಡಾ.ಹರೀಶ್, ಡಾ.ಸೆಂಥಿಲ್, ಡಾ.ಮುರಳಿ ಇತರರು ಇದ್ದರು.