ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳೋಣ technology 
ರಾಜ್ಯ

ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳೋಣ technology

ಕದರಿಪುರ: ಆಧುನಿಕ ಪ್ರಪಂಚದಲ್ಲಿ ವೇಗವಾಗಿ ಟೆಕ್ನಾಲಜಿ ಬೆಳೆಯುತ್ತಿದೆ. ಆದ್ದರಿಂದ ನಾವುಗಳು ಪ್ರತಿದಿನವೂ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಅಪ್ಡೇಟ್​ ಆಗಬೇಕಿದೆ. ಈಗಿನಿಂದಲೇ ತಂತ್ರಜ್ಞಾನ ಅಳವಡಿಸಿಕೊಂಡರೆ ಉನ್ನತ ವ್ಯಾಸಂಗ ಮಾಡುವಾಗ ಸಹಕಾರಿಯಾಗಲಿದೆ ಎಂದು ಶಾಲೆಯ ಹಳೇ ವಿದ್ಯಾರ್ಥಿ, ವಕೀಲ ಕೆ.ಎಲ್​.ಮಂಜುನಾಥ್​ ತಿಳಿಸಿದರು.technology
ಕೋಲಾರ ತಾಲೂಕು ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದ ಮತ್ತು ಸಾಂಸತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಎಐ ಟೆಕ್ನಾಲಜಿ ಬಂದಿದ್ದು, ಸುಮಾರು 100&150 ಜನರು ಮಾಡುವ ಕೆಲಸವನ್ನು ಎಐ ನಿರ್ವಹಿಸಬಲ್ಲದು. ಇನ್ನು ತಂತ್ರಾನ ಮುಂದುವರೆದಂತೆಲ್ಲ ಅವಕಾಶ ಹೆಚ್ಚು ದೊರೆಯುತ್ತವೆ. ವಿದ್ಯಾರ್ಥಿಗಳು ಸ್ಮೂವಾಗಿ ಗಮನಹರಿಸಿ ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡರೆ ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದು ಎಂದರು.
ದುಶ್ಚಟಗಳಿಗೆ ಬಲಿಯಾಗಬೇಡಿ, ಮೊಬೈಲ್​ ಬಳಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗುತ್ತಿದ್ದು, ಓದಿನ ಕಡೆ ಗಮನ ಹರಿಸದೆ ತ್ಪಪು ದಾರಿ ಹಿಡಿಯುತ್ತಿದ್ದಾರೆ. ಪಾಲಕರು ಮಕ್ಕಳ ಮೇಲೆ ನಿಗಾ ವಹಿಸಿ ಉತ್ತಮ ವಾತಾವರಣದಲ್ಲಿ ಬೆಳಸಬೇಕು ಎಂದು ಹೇಳಿದರು.
ಬಾಲ್ಯವಿವಾಹ ಮಾಡುವುದು ಕಾನೂನು ಅಪರಾಧ. 6 ರಿಂದ 18 ವರ್ಷದ ವರೆಗೂ ಕಡ್ಡಾಯ ಶಿಣ ಕೊಡಿಸಬೇಕು. ಶಿಣದಿಂದ ವಂಚಿತರಾಗಬೇಡಿ ಎಂದು ತಿಳಿಸಿದರು.
ಕದರಿಪುರ ಶಾಲೆಯಿಂದ ಕುರುಗಲ್​ ಶಾಲೆಗೆ ಬಡ್ತಿ ಮುಖ್ಯಶಿಕರಾಗಿ ವರ್ಗಾವಣೆಯಾದ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಮಾಜಿ ಅಧ್ಯ ಕೆ.ಎಂ.ಚನ್ನಕೇಶವ, ಕೆ.ಎನ್​.ದೇವರಾಜ್​, ಕೆ.ಎಂ.ಮೂರ್ತಿ, ಇ.ಎನ್​.ತಿರುಮಲಮೂರ್ತಿ, ಕೆ.ಸಿ.ನರಸಿಂಹಮೂರ್ತಿ, ಕೆ.ಎಸ್​.ಅಂಜನಪ್ಪ, ಕೆ.ಎಂ.ನರಸಿಂಹಮೂರ್ತಿ, ಎನ್​.ಓಬಳೇಶ್​, ಜಿ.ಆನಂದ್​ ಕುಮಾರ್​, ನಾಗೇಶ್​, ಟಿ.ನಾರಾಯಣಪ್ಪ ಇದ್ದರು.