ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮದ್ದೂರು ತಾಲೂಕು ಯುವ ಪರಿಷತ್‌ಗೆ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಕುಮಾರ್, ಮುನಿಸ್ವಾಮಿ, ಸ್ವಾಮಿ, ಪರಮೇಶ್ ಇದ್ದರು.
- ಮಂಡ್ಯ ಜಿಲ್ಲಾ ಯುವ ಪರಿಷತ್
- ಪ್ರವಾಸಿ ಮಂದಿರ
ಮದ್ದೂರು: ಮಂಡ್ಯ ಜಿಲ್ಲಾ ಯುವ ಪರಿಷತ್ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮದ್ದೂರು ತಾಲೂಕು ಯುವ ಪರಿಷತ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಪರಮೇಶ್ವರ್ ಮಾತನಾಡಿ, 80 ಹಾಗೂ 90ರ ದಶಕದಲ್ಲಿದ್ದ ಯುವಕ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು, ಮಹಿಳಾ ಮಂಡಳಿಗಳು ಜಿಲ್ಲೆಯಲ್ಲಿ ಕಾಣೆಯಾಗುತ್ತಿವೆ. ಯುವಜನರು ದುಶ್ಚಟದ ದಾಸರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಕರನ್ನು ಸರಿದಾರಿಗೆ ತಂದು ಮತ್ತೆ ಯುವಕ ಸಂಘಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಲು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ಮದ್ದೂರು ತಾಲೂಕು ಯುವ ಪರಿಷತ್ ಅಧ್ಯಕ್ಷರಾಗಿ ತೈಲೂರು ಸಿದ್ದರಾಜು, ಗೌರವಾಧ್ಯಕ್ಷರಾಗಿ ಅರುವನಹಳ್ಳಿ ಸಿದ್ದರಾಜು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬೆಳ್ಳೂರು ಮಹೇಶ್, ಖಜಾಂಚಿಯಾಗಿ ಡಿ.ಎ.ಕೆರೆ ಮಹೇಂದ್ರ, ಉಪಾಧ್ಯಕ್ಷರಾಗಿ ಗೀತಾ, ಸಂಘಟನಾ ಕಾರ್ಯದರ್ಶಿಯಾಗಿ ಕರಡ ಕೆರೆ ಯೋಗೇಶ್ ಅವರನ್ನು ಜಿಲ್ಲಾ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಯುವ ಪರಿಷತ್ ಉಪಾಧ್ಯಕ್ಷ ಕುಮಾರ್, ಸಹ ಕಾರ್ಯದರ್ಶಿ ಮುನಿಸ್ವಾಮಿ, ಸಂಘಟನಾ ಕಾರ್ಯದರ್ಶಿ ಸ್ವಾಮಿ, ಪರಮೇಶ್ ಸೇರಿದಂತೆ ಇತರರು ಹಾಜರಿದ್ದರು.