ಭಾಲ್ಕಿಯ ಕಾರಂಜಾ ರೈತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 3ನೇ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಕೆ.ನೀಲಾ, ಮಲ್ಲಮ್ಮ ಆರ್.ಪಾಟೀಲ, ಡಾ.ಗೀತಾ ಖಂಡ್ರೆ, ಸುರೇಶ ಚನಶೆಟ್ಟಿ, ಸೋಮಶೇಖರ ಬಿರಾದಾರ ಚಿದ್ರಿ, ಶಕುಂತಲಾ ಬೆಲ್ದಾಳೆ, ಡಾ.ಗೌರಮ್ಮ ಸಿದ್ದಾರೆಡ್ಡಿ, ಚಂದ್ರಕಾಂತ ಗಂಗಶೆಟ್ಟಿ ಇತರರಿದ್ದರು.
- ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಆಶಯ
- ಭಾಲ್ಕಿಯಲ್ಲಿ ಸಮ್ಮೇಳನ ಉದ್ಘಾಟನೆ
ಭಾಲ್ಕಿ: ಮಹಿಳೆಯರು ಮುಟ್ಟಿದ ಸಾಹಿತ್ಯಗಳಿಲ್ಲ, ಆದರೆ ಇದುವರೆಗೂ ಒಬ್ಬ ಮಹಿಳೆಗೂ ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ, ನೂರು ವರ್ಷಗಳಲ್ಲಿ ಒಬ್ಬ ಮಹಿಳೆಯೂ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಲ್ಲ. ಇದು ನಾವು ವಿಚಾರ ಮಾಡುವ ಸಂಗತಿ ಎಂದು ಹಿರಿಯ ಸಾಹಿತಿ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.
ಎಲ್ಲಾ ಭಾಷೆಗಳಲ್ಲಿಯೂ ಕನ್ನಡ ಭಾಷೆ ಸುಲಲಿತ, ಸುಂದರ ಭಾಷೆಯಾಗಿದೆ. ಸ್ವತಂತ್ರ ಲಿಪಿ ಹೊಂದಿರುವ ಉತ್ತಮ ಭಾಷೆ ಕನ್ನಡ, ಸುಂದರ ಲಿಪಿಗಳನ್ನು ಹೊಂದಿರುವ ಕನ್ನಡಕ್ಕೆ ಲಿಪಿಗಳ ರಾಣಿಯೆಂದು ಕರೆಯುತ್ತಾರೆ ಎಂದು ಹಿರಿಯ ಸಾಹಿತಿ, ವೈದ್ಯೆ ಡಾ.ವಿಜಯಲ$್ಮ ಬಾಳೆಕುಂದ್ರಿ ಹೇಳಿದರು.
ಪಟ್ಟಣದ ಕಾರಂಜಾ ರೈತ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 3ನೇ ಮಹಿಳಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಿಂದಲೂ ಬಸವಣ್ಣನವರು, ಅಲ್ಲಮಪ್ರಭುಗಳು ಬಿಟ್ಟರೇ ಅತಿ ಹೆಚ್ಚು ವಚನಗಳನ್ನು ರಚಿಸಿದವರು ಅಕ್ಕ ನಾಗಮ್ಮನವರಾಗಿದ್ದಾರೆ. ಅಕ್ಕಮಹಾದೇವಿ ಆತ್ಮೋಧಾರ ಮಾಡಿಕೊಂಡರೆ, ಅಕ್ಕನಾಗಮ್ಮ ಲೋಕೋಧಾರ ಮಾಡಿದ್ದಾರೆ. ನಮ್ಮ ಹೆಣ್ಣುಮಕ್ಕಳು ಅಕ್ಕನಾಗಮ್ಮನಂತಾಗಬೇಕು. ಮಹಿಳೆಯರು ತೀಕ್ಷ್ತ್ರ್ಣವಾಗಿ ಬರೆಯುವ ಸಾಹಿತ್ಯಕಾರರಾಗಬೇಕು ಎಂದರು.
ಬಸವಕಲ್ಯಾಣ ಅನುಭಪ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ, ಹುಲಸೂರಿನ ಡಾ.ಶಿವಾನಂದ ಮಹಾಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು.
2ನೇ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ನೀಲಾ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು. ಹಿರಿಯ ಸಾಹಿತಿ ಮಲ್ಲಮ್ಮ ಆರ್.ಪಾಟೀಲ ಸಮ್ಮೇಳನಾಧ್ಯಕ್ಷರ ನುಡಿ ನುಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ.ಸೋಮಶೇಖರ ಧನ್ಯಜಿವನ ಗ್ರಂಥ ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾದ್ಯಕ್ಷ ಸುರೇಶ ಚನಶೆಟ್ಟಿ ಆಶಯನುಡಿ ನುಡಿದರು. ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಪ್ರಾಸ್ತಾವಿಕ ಮಾತನಾಡಿದರು. ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಸ್ವಾಗತಿ ಸಮಿತಿ ಅಧ್ಯಕ್ಷೆ ಡಾ.ಗೀತಾ ಖಂಡ್ರೆ, ಚಂದ್ರಕಾಂತ ಗಂಗಶೆಟ್ಟಿ, ಸೋಮಶೇಖರ ಬಿರಾದಾರ ಚಿದ್ರಿ, ಶಕುಂತಲಾ ಬೆಲ್ದಾಳೆ, ಡಾ.ಗೌರಮ್ಮ ಸಿದ್ದಾರೆಡ್ಡಿ, ಡಾ.ವಿಜಯಕುಮಾರ ಪಾಟೀಲ, ಪ್ರೊ.ಓಂಪ್ರಕಾಶ ಧಡ್ಡೆ, ಶಿವಕುಮಾರ ಕೋಸಮ, ಡಾ.ಪ್ರಭು.ಎಸ್, ಶಿವಶಂಕರ ಬಾಮಂಡಿ, ಬಸವರಾಜ ದನ್ನೂರ, ಡಾ.ವಿದ್ಯಾವತಿ ಬಲ್ಲೂರ, ಸುನೀತಾ ದಾಡಗೆ, ಪ್ರೊಣ ಮಂಗಲಾ ಪಾಟೀಲ, ರಮೇಶ ಚಿದ್ರಿ, ಕಾಶಿನಾಥ ಲದ್ದೆ, ಅಶೋಕ ಬಾವುಗೆ, ಮಲ್ಲಿಕಾರ್ಜುನ ಕುಂಚಗೆ, ಸಂತೋಷ ಬಿಜಿಪಾಟೀಲ, ಮಲ್ಲಿಕಾರ್ಜನ ಹಲಮಂಡಗೆ ಇತರರಿದ್ದರು. ಮಧುಪ್ರಿಯಾ ಅರಳಿ ತಂಡದಿಂದ ಜಾನಪದ ಗೀತೆ ಮತ್ತು ನಾಡಗೀತೆ, ಸದ್ಗುರು ವಿದ್ಯಾಲಯದ ವಿದ್ಯಾರ್ಥಿಗಳು ವಚನ ನೃತ್ಯ ನಡೆಸಿಕೊಟ್ಟರು. ನಾಗಭೂಷಣ ಮಾಮಡಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಸಂತೋಷ ಪಾಟೀಲ ವಂದಿಸಿದರು.
ಮಹಿಳೆಯರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಒತ್ತಡದ ಮಧ್ಯ ಬದುಕು ಸಾಗಿಸುವ ಮಹಿಳೆಯರಿಗೆ ಗೌರವ ಕೊಡುವ ಕಾರ್ಯವಾಗಬೇಕು. -
— > ಸುರೇಶ ಚನಶೆಟ್ಟಿ ಕಸಾಪ ಜಿಲ್ಲಾಧ್ಯಕ್ಷ ಬೀದರ್