Let Vanava be a lover of nature.
ಬುಕ್ಕಾಪಟ್ಟಣ : ಮನುಷ್ಯ ಪ್ರಕೃತಿ ಪ್ರಿಯನಾಗಬೇಕು. ನಿಸರ್ಗದಡೆಗೆ ಮತ್ತೊಮ್ಮೆ ಎಂಬ ೋಷವಾಕ್ಯದೊಂದಿಗೆ ಪ್ರಕೃತಿಯ ಆರಾಧನೆಯಲ್ಲಿ ಮನೋಲ್ಲಾಸ ಹೊಂದಬೇಕು ಎಂದು ಹೊಸಪಾಳ್ಯ ಶಿಕ್ಷಕ ಶ್ರೀನಿವಾಸ ತಿಳಿಸಿದರು.
ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಹೊಸಪಾಳ್ಯ ಶಾಲೆಯಲ್ಲಿ ಇಕೋ ಕ್ಲಬ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅರಣ್ಯ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ಬೆಳೆದರೂ ಸಹ ಪ್ರಕೃತಿಗಿಂತ ದೊಡ್ಡವನಾಗಲಾರ. ಪ್ರಾಣಿ, ಪಕ್ಷಿ, ಗಿಡ, ಮರ ಇವೆಲ್ಲವುಗಳ ಮೇಲೆ ಹೆಚ್ಚಿನ ಪ್ರೀತಿ, ಕಾಳಜಿ ಹೊಂದಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರಾಣಿ-ಪಕ್ಷಿಗಳಿಗೆ ಅಪಾಯ ಉಂಟಾಗುವ ಯಾವುದೇ ಕೆಲಸಗಳನ್ನು ವಾಡುವ ಮುನ್ನ ಯೋಚಿಸಬೇಕು. ಜಗತ್ತು ಇರುವುದು ಕೇವಲ ಮನುಷ್ಯನಿಗೆ ಅಲ್ಲ. ಜಗತ್ತಿನಲ್ಲಿ ಜೀವಿಸುವ ಹಕ್ಕು ಪ್ರತಿಯೊಂದು ಪ್ರಾಣಿಗೂ ಪಕ್ಷಿಗೂ ಜೀವಿಗಳಿಗೂ ಇದೆ. ಅದನ್ನು ಮರೆತು ವಾನವ ಎಲ್ಲವೂ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮನಸ್ಥಿತಿ ಹೊಂದಿ ಬೆಟ್ಟ ಗುಡ್ಡಗಳನ್ನು ಕಡಿದು ಸವಾ ವಾಡಿ ಮಳೆ ಬೆಳೆ ಕಮ್ಮಿ ಆಗುವಂತೆ ವಾಡಿದ್ದಾನೆ. ಗಿಡ ಮರಗಳನ್ನು ಕಡಿದು ಪ್ರಾಣಿ-ಪಕ್ಷಿಗಳಿಗೆ ಆಹಾರವಿಲ್ಲದಂತೆ ವಾಡಿದ್ದಾರೆ. ಹೀಗಾಗಿ ಪ್ರಕೃತಿಯ ಮೇಲೆ ವಾನವನ ಹಸ್ತಕ್ಷೇಪವನ್ನು ಕಡಿಮೆ ವಾಡಬೇಕು ಎಂದರು.