ಶ್ರೀನಾಗದೇವತೆ ದೇವಾಲಯ ವಾರ್ಷಿಕೋತ್ಸವ Temple
ನಂದಗುಡಿ: ಸನಾತನ ಸಂಸತಿಯಲ್ಲಿ ದೇವಾಲಯಗಳಿಗೆ ವಿಶೇಷ ಸ್ಥಾನವಿದೆ. Temple ದೇವಾಲಯಗಳಲ್ಲಿ ಕಾಲ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಶ್ರೀಮುನೇಶ್ವರಸ್ವಾಮಿ ಸೇವಾ ಟ್ರಸ್ಟ್ನ ಸಂಸ್ಥಾಪಕ ಪಿ.ಕಲ್ಲಪ್ಪ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಶ್ರೀಮುನೇಶ್ವರಸ್ವಾಮಿ, ಶ್ರೀಸಪ್ತಮಾತೃಕೆ, ಶ್ರೀನಾಗದೇವತೆ ದೇವಾಲಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಪ್ರಾಚಿನ ಕಾಲದಿಂದಲೂ ನಮ್ಮ ಹಿರಿಯರು ಒಟ್ಟಾಗಿ ಧಾರ್ಮಿಕ ಕಾರ್ಯಗಳ ಮೂಲಕ ಗ್ರಾಮಗಳಲ್ಲಿ ಶಾಂತಿ, ಸಾಮರಸ್ಯದ ಸಂಸ್ಕಾರ ರೂಢಿಸಿದ್ದಾರೆ. ಸಹಬಾಳ್ವೆ, ಏಕತೆಯನ್ನು ಮೂಡಿಸಲು ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದರು. ಪ್ರತಿಯೊಬ್ಬರು ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ಜೀವನ ಸಾಗಿಸುವಂತಾಗಬೇಕು. ಮನುಷ್ಯನಿಗೆ ಸಮಸ್ಯೆಯಾದರೆ ಶಾಂತಿಗಾಗಿ ದೇವರ ಮೊರೆ ಹೋಗುತ್ತಾನೆ. ಆದ್ದರಿಂದ ದೇವಾಲಯಗಳನ್ನು ಶಾಂತಿಗೆ ಪೂರಕ ವಾತಾವರಣದಲ್ಲಿ ನಿರ್ಮಿಸಬೇಕು ಎಂದರು.
ಈ ಕ್ಷೇತ್ರದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಭಾನುವಾರ ಹಾಗೂ ಹುಣ್ಣಿಮೆ, ಅಮಾವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತವೆ ಎಂದು ತಿಳಿಸಿದರು.
ವಾಷಿಕೋತ್ಸವದ ಪ್ರಯುಕ್ತ ಮಂಗಳವಾದ್ಯ, ವೀರಗಾಸೆ, ಗಂಗಾ ಪೂಜೆಯೊಂದಿಗೆ ಗಣಪತಿ ವಾಸ್ತು, ನವಗ್ರಹ ಪೂಜೆ, ಪ್ರಧಾನ ಕಳಶರಾಧನೆ, ವಿವಿಧ ಹೋಮ, ಪಂಚಾಮೃತಾಭಿಷೇಕ, ಪೂರ್ಣಾಹುತಿ, ಬಲಿಹರಣ, ಕುಂಭಾಭಿಷೇಕ ನೆರವೇರಿದವು.
ನಂದಗುಡಿ ಹೋಬಳಿಯ ಶಿವನಾಪುರದಲ್ಲಿ ಹಮ್ಮಿಕೊಂಡಿದ್ದ ಶ್ರೀಮುನೇಶ್ವರಸ್ವಾಮಿ, ಶ್ರೀಸಪ್ತಮಾತೃಕೆ, ಶ್ರೀನಾಗದೇವತೆ ದೇವಾಲಯ ವಾರ್ಷಿಕೋತ್ಸವದಲ್ಲಿ ಶ್ರೀಮುನೇಶ್ವರಸ್ವಾಮಿ ಸೇವಾ ಟ್ರಸ್ಟ್ನ ಸಂಸ್ಥಾಪಕ ಪಿ.ಕಲ್ಲಪ್ಪ, ರಾಜಮ್ಮ, ಕೆ.ಕಲ್ಯಾಣ್, ಕುಶಾಲ, ಚಲಪತಿ, ಮಮತಾ, ಜಸ್ಮಿತಾ, ವಹಿತ್, ರಿದನ್ಯಾ ಇತರರಿದ್ದರು.