ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಿವಶರಣರ ಹಿಂದೂ ಸಮಾವೇಶದ ಕರಪತ್ರಗಳನ್ನು ಶಾಸಕ ಡಾ.ಅವಿನಾಶ ಜಾಧವ್ ಬಿಡುಗಡೆ ಮಾಡಿದರು. ಚಂದು ಪಾಟೀಲ್, ವಿಜಯಕುಮಾರ ಚೆಂಗಟಾ, ರವಿರಾಜ ಕೊರವಿ, ರಾಹುಲ್ ಯಾಕಾಪುರ, ಗೋಪಾಲರಾವ ಕಟ್ಟಿಮನಿ, ಅಶೋಕ ಮಾನಕರ್ ಇತರರಿದ್ದರು.
- ಶಿವಶರಣರ ಹಿಂದೂ ಸಮಾವೇಶದ ಕಾರ್ಯಾಧ್ಯಕ್ಷ ಚಂದು ಪಾಟೀಲ್ ಹೇಳಿಕೆ
- ಚಿಂಚೋಳಿಯಲ್ಲಿ ಕರಪತ್ರ ಬಿಡುಗಡೆ
ಚಿಂಚೋಳಿ: ಎಲ್ಲ ವರ್ಗದವರನ್ನು ಒಗ್ಗೂಡಿಸಲು ಕಲಬುರಗಿಯಲ್ಲಿ ಬೃಹತ್ ಶಿವಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೆ ಸಾಥ್ ನೀಡಬೇಕು ಎಂದು ಸಮಾವೇಶವ ಕಾರ್ಯಾಧ್ಯಕ್ಷರಾದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಮನವಿ ಮಾಡಿದರು.
ಕಲಬುರಗಿಯಲ್ಲಿ ಸೆ.27ರಂದು ನಡೆಯಲಿರುವ ಶಿವಶರಣರ ಹಿಂದೂ ಸಮಾವೇಶದ ನಿಮಿತ್ತ ಚಂದಾಪುರದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕನ್ಹೇರಿ ಶ್ರೀ ಸೇರಿ ನೂರಾರು ಮಠಾಧೀಶರು ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ. ಕನ್ಹೇರಿ ಶ್ರೀಗಳ ಮಠವೂ ಸುಮಾರು 300 ಎಕರೆಯಲ್ಲಿ ವಿಸ್ತಾರಗೊಂಡಿದೆ. ಗೋಶಾಲೆ, ಸಾವಯವ ಕೃಷಿ, ಸೌಹಾರ್ದತೆ ಮೌಲ್ಯಗಳ ಸಾರುವ ಕೆಲಸಗಳನ್ನು ಗುರುಗಳು ಮಾಡುತ್ತಿದ್ದಾರೆ. ಇಂತಹ ಶ್ರೇಷ್ಠ ಯತಿಗಳು ನಮಗೆಲ್ಲರಿಗೂ ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಅವರ ಗೆಲವಿಗೆ ಚಿಂಚೋಳಿ ಕ್ಷೇತ್ರದ ಜನತೆಯ ಕೊಡುಗೆ ಅಪಾರವಾಗಿದೆ. ಶಾಸಕ ಡಾ.ಅವಿನಾಶ ಜಾಧವ್ ಸರಳ ವ್ಯಕ್ತಿತ್ವ ಹೊಂದಿದ್ದು, ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅವರ ಹ್ಯಾಟ್ರಿಕ್ ಗೆಲುವು ಪಕ್ಕಾ. ಹಿಂದೂ ಸಮಾವೇಶಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಮಾತನಾಡಿ, ದೇಶದಲ್ಲಿ ಸಾಮರಸ್ಯ ಒಡೆಯಲು ಸಂಚು ನಡೆಸುತ್ತಿರುವ ಪಟ್ಟಭದ್ರ ಶಕ್ತಿಗಳಿಗೆ ಸೆಡ್ಡು ಒಡೆದು "ನಾವೆಲ್ಲರೂ ಒಂದು, ನಾವೆಲ್ಲ ಹಿಂದೂ' ಎಂಬ ಸಂದೇಶ ಸಾರಲು ನಮ್ಮ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೋಲಿ ಸಮಾಜ ಜಿಲ್ಲಾಧ್ಯಕ್ಷ ರವಿರಾಜ ಕೊರವಿ ಮಾತನಾಡಿ, ಸೆ.27ರಂದು ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಶಿವಶರಣರ ಹಿಂದೂ ಸಮಾವೇಶ ನಡೆಯಲಿದ್ದು, ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಸಮಾರಂಭದಲ್ಲಿ ಭಾಗಿಯಾಗಬೇಕಿದೆ. ಜಾತಿ, ಮತ, ಪಂಥ ಎನ್ನದೇ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಡಾ.ಅವಿನಾಶ ಜಾಧವ್ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಮುಖರಾದ ವಿಜಯಕುಮಾರ ಚೆಂಗಟಾ, ರಾಹುಲ್ ಯಾಕಾಪೂರ, ಅಶೋಕ ಮಾನಕರ್, ಶರಣು ಶೆಟ್ಟಿ, ಶಿವಯೋಗಿ ರುಸ್ತಂಪುರ, ಚಂದ್ರಶೇಖರ ಗುತ್ತೇದಾರ್, ಮಲ್ಲು ಕೊಡಂಬುಲ್, ನಾಗರಾಜ ಮಲಕೂಡ, ಅಮರ ಬಬಲಾದಿ, ರಾಜು ಪವಾರ್, ಪ್ರೇಮಸಿಂಗ್ ಜಾಧವ್, ವೀರೇಶ ಯಂಪಳ್ಳಿ, ಸತೀಶ ರೆಡ್ಡಿ, ಕಿರಣ ಪಂಚಾಳ, ಅಂಬರೀಷ ಓಲಗೇರಿ, ಸುನೀಲ್ ನಿಡಗುಂದಾ, ಸಂಕೇತ ಬಬಲಾದ, ಗಿರಿರಾಜ ನಾಟೀಕಾರ, ರಂಗಣ್ಣ ಚಂದ್ರಂಪಳ್ಳಿ, ಅಭಿಷೇಕ ಮಲಕನೂರ, ಶಂಭುಲಿಂಗ ಶಿವಪೂರಿ, ನಂದಕುಮಾರ ಪಾಟೀಲ್, ಗುರು ಪಾಟೀಲ್, ಚಂದ್ರಶೇಖರ ಜಮಾದಾರ, ನಾಗೇಶ ಪಾಟೀಲ್, ಸಂತೋಷ ಗಡಂತಿ, ಭೀಮಶೆಟ್ಟಿ ಮುರುಡಾ, ಶರಣು ಸಾಲಿಮಠ ಇತರರಿದ್ದರು.
ಜಾತಿ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ಇದನ್ನು ಹೋಗಲಾಡಿಸಬೇಕಿದೆ. ಹಿಂದೂ ಸಮಾಜ ಒಂದಾಗಬೇಕಿದ್ದು, ಯುವ ನಾಯಕ ಚಂದು ಪಾಟೀಲ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಚಿಂಚೋಳಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಮೂಲಕ ಯಶಸ್ವಿಗೊಳಿಸೋಣ.
ಜಾತಿ, ಮತ, ಪಂಥ ತೊರೆದು ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಸಂದೇಶ ಸಾರಲು ಯುವ ಪಡೆ ಸಜ್ಜಾಗಬೇಕು. ಚಿಂಚೋಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಸಾರ್ವಜನಿಕರು ಭಾಗಿಯಾಗಿ ಸಮಾರಂಭಕ್ಕೆ ಸಾಥ್ ನೀಡೋಣ.