ಮಹನೀಯರ ಉಪದೇಶ ಪಾಲಿಸೋಣ noble 
ರಾಜ್ಯ

ಮಹನೀಯರ ಉಪದೇಶ ಪಾಲಿಸೋಣ noble

ಮುಳಬಾಗಿಲು: ಶ್ರೀ ಸವಿತಾ ಮಹರ್ಷಿ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರು ನೀಡಿರುವ ಉಪದೇಶ ಪಾಲನೆ ಮಾಡುವ ಮೂಲಕ ಸುಸಂಸತ ಸಮಾಜ ಕಟ್ಟೋಣ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.noble
ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿಯಲ್ಲಿ ಮಾತನಾಡಿ, ಇತ್ತೀಚೆಗೆ ಸೌಲಭ್ಯ, ಅನುದಾನ ಪಡೆದುಕೊಳ್ಳಲು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಯಾವ ಸಮುದಾಯದಲ್ಲಿ ಒಗ್ಗಟ್ಟು ಮತ್ತು ವಿದ್ಯಾಭ್ಯಾಸ ಇರುತ್ತದೆಯೋ ಅಂತಹ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರುತ್ತದೆ ಎಂದರು.
ಸವಿತಾ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಈಗಾಗಲೇ 14 ಕೋಟಿ ರೂ. ಇದೆ. ಮುಳಬಾಗಿಲಿನಲ್ಲಿ ನಿಮಾರ್ಣ ಆಗುವ ಸಮುದಾಯದ ಭವನಕ್ಕೆ ನಿಗಮದಿಂದ ಹಾಗೂ ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿಸಿ ಮುಂದಿನ ದಿನಗಳಲ್ಲಿ ಉತ್ತಮ ಸಮುದಾಯ ಭವನ ಮಾಡಿಕೊಡಲಾಗುವುದು ಎಂದು ತಿಳಿಸಿದರು.
2024-&25ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸವಿತಾ ಸಮಾಜದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ನಟರಾಜ್​ ಅವರನ್ನು ಸನ್ಮಾನಿಸಲಾಯಿತು.
ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮುತ್ತುರಾಜು, ತಾಲೂಕು ಅಧ್ಯಕ್ಷ ಬಿ.ವಿ.ರಾಮಚಂದ್ರಪ್ಪ, ಮುಖಂಡರಾದ ಆನ್ನೇಹಳ್ಳಿ ಎ.ವಿ.ಮಂಜುನಾಥ್​, ಬಿ.ಎಸ್​.ಕೋನಪ್ಪ, ಶಿಕ್ಷಕರ ಸಂಘದ ತಾಲೂಕು ಸಹ ಕಾರ್ಯದರ್ಶಿ ಎಚ್​.ಮಂಜುನಾಥ್​, ಹೆಬ್ಬಣಿ ಜಿ.ಮಣಿ, ಲಿಂಗಾಪುರ ಎಲ್​.ಎಚ್​. ನಾರಾಯಣಸ್ವಾಮಿ, ಭಜಂತ್ರಿಗಳ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎನ್​.ಅಶ್ವತ್ಥ್​ ನಾರಾಯಣ, ಎನ್​.ನಾಗರಾಜ್​ ನಿರ್ದೇಶಕ ಟಿ.ಎಂ.ಗಣೇಶ್​, ಕಾರ್ಯದರ್ಶಿ ಎಂ.ವಿ.ಜಗದೀಶ್​, ಧನಂಜಯ್​, ತಾಯಲೂರು ಮೋಹನ್​ ಬಾಬು, ಕಿರುಮಣಿ ಕೆ.ಎಂ.ರಾಜಪ್ಪ, ಮುತ್ಯಾಲಪೇಟೆ ಎಂ.ನಾಗರಾಜಪ್ಪ, ನಿವೃತ್ತ ಸೈನಿಕ ಆರ್​.ಮುರಳಿ ಪ್ರಸನ್ನ, ಬಾಳಸಂದ್ರ ಮಂಜುನಾಥ್​ ಇದ್ದರು.