ದೇವನಹಳ್ಳಿ ಪಟ್ಟಣದ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಆಯೋಜಿಸಿದ್ದ 119ನೇ ಜಯಂತಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿ ಸದಸ್ಯ ವಿರುಪಾಕ್ಷ, ಜಿಲ್ಲಾ ಉಪಾಧ್ಯಕ್ಷ ಮಹದೇವಯ್ಯ, ಜಿಲ್ಲಾ ಕಾರ್ಯದರ್ಶಿ ಶಾಂತಮೂರ್ತಿ, ವೀರಶೈವ ಸಮಾಜದ ಮುಖಂಡರು ಇದ್ದರು.  
ರಾಜ್ಯ

ಶ್ರೀಗಳ ಆದರ್ಶ ಪಾಲಿಸೋಣ / DEVANAHALLI

ದೇವನಹಳ್ಳಿ : ಸಮಾಜದ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ಎಲ್ಲರಿಗೂ ಉಚಿತ ಶಿಕ್ಷಣ, ವಸತಿ, ಅನ್ನ ನೀಡಿದ ತ್ರಿವಿಧಿ ದಾಸೋಹಿ ಶ್ರೀ ಸಿದ್ಧಗಂಗಾ ಶ್ರೀಗಳ ಸಾಧನೆಯನ್ನು ವಿಶ್ವದಲ್ಲಿ ಯಾರು ಮಾಡಲು ಸಾಧ್ಯವಿಲ್ಲ ಎಂದು ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ.ಎಸ್​.ರಮೇಶ್​ ಹೇಳಿದರು.
ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜಯಂತಿಯಲ್ಲಿ ಮಾತನಾಡಿ, ಶ್ರೀಗಳ ಆದರ್ಶ ಪಾಲಿಸಿತ್ತಾ ಬಡವರಿಗೆ ಸಹಾಯ ಮಾಡಿದರೆ ಅದೇ ಶ್ರೀಗಳಿಗೆ ಸಲ್ಲಿಸುವ ಕಾಣಿಕೆ ಎಂದು ಹೇಳಿದರು.
ತಾಲೂಕು ವೀರಶೈವ ಲಿಂಗಾಯತ ಸಮುದಾಯದ ಖಜಾಂಚಿ ಎಸ್​. ನಾಗೇಶ್​ ಮಾತನಾಡಿ, ಶ್ರೀಗಳು ಅನೇಕ ಬಡ ಮಕ್ಕಳಿಗೆ ದಾರಿದೀಪವಾಗಿದ್ದರು. ಮಠದಲ್ಲಿ ಶಿಕ್ಷಣ ಪಡೆದ ಅದೇಷ್ಟೋ ವಿದ್ಯಾರ್ಥಿಗಳು ವಿವಿಧ ಇಲಾಖೆಗಳಲ್ಲಿ ಉನ್ನತ ಉದ್ದೆಗಳಲ್ಲಿದ್ದಾರೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಯಾಗಿ ಬದುಕಬಹುದು ಎಂದರು.
ಜಿಲ್ಲಾ ನಿರ್ದೇಶಕರಾದ ಅಶ್ವಿನಿ ಮಲ್ಲಿಕಾರ್ಜುನ, ಎಚ್​. ಪುಷ್ಪಾವತಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್​ಕುಮಾರ್​, ಪದಾಧಿಕಾರಿಗಕಳಾದ ಮಹದೇವಪ್ಪ, ಕಾಂತರಾಜು, ಮಲ್ಲಿಕಾರ್ಜುನ, ಮಹೇಶ್​, ಸದಾಶಿವಪ್ಪ, ವೀರಭದ್ರಪ್ಪ, ಕಾರ್ತಿಕ್​, ಶಿವಕುಮಾರ ಆರಾಧ್ಯ, ತಾಲೂಕು ಮಹಿಳಾ ಅಧ್ಯಕ್ಷೆ ಶಶಿಕಲಾ ಕಾಂತರಾಜ್​ ಇದ್ದರು.