ಜೇವರ್ಗಿ: ಸ್ವಾತಂತ್ರ್ಯ ದಿನ ನಮ್ಮೆಲ್ಲರ ಹಬ್ಬವಾಗಿದೆ. ಅಸಂಖ್ಯ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದ್ದು, ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡೋಣ ಎಂದು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಹೇಳಿದರು. ಮಿನಿ ವಿಧಾನಸೌದದಲ್ಲಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ತಾಪಂ ಇಒ ವೀರಣ್ಣ ಕೌಲಗಿ, ಸಿಪಿಐ ಬಾಪುಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪ ಕಟ್ಟಿ, ಪ್ರಮುಖರಾದ ದಾನಪ್ಪಗೌಡ ಹಳಿಮನಿ, ಸತೀಶ ಸಂಗನ್, ಡಾ.ಉಮೇಶ ಶರ್ಮಾ, ಚಂದ್ರಕಾಂತ ಜೀವಣಗಿ, ಸುಮಂಗಲಾ ಹೂಗಾರ, ಡಾ.ಶೋಭಾ ಸಜ್ಜನ್, ಗಜಾನನ ಬಿರಾದಾರ, ಬಸವರಾಜ ತೇಲಕರ್, ಹಳ್ಳೆಪ್ಪಾಚಾರ್ಯ ಜೋಶಿ, ರಾಜಶೇಖರ ಸೀರಿ, ವೀರೇಶ ಕಂದಗಲ್, ಬೆಣ್ಣೆಪ್ಪ ಕೊಂಬಿನ್, ಮಹಿಮೂದ್ ನೂರಿ, ಸಂಗಮೇಶ ಕೊಂಬಿನ್, ರವಿಚಂದ್ರ ಗುತ್ತೇದಾರ್, ನಿಂಗಪ್ಪ ಪೂಜಾರಿ, ನಾಗರಾಜ ಹಾಲಗೂರ, ಬಸವರಾಜ ಲಾಡಿ, ಗುರುಶಾಂತಪ್ಪ ಚಿಂಚೋಳಿ ಇತರರಿದ್ದರು.