ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸರ್.ಎಂ.ವಿ.ಜನ್ಮದಿನ ಹಾಗೂ ಇಂಜಿನಿಯರ್ಸ್ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಭೀಮನಗೌಡ ಕ್ಯಾತ್ಯಾಳ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ್, ಡಾ.ಸಿದ್ದರಾಜರೆಡ್ಡಿ, ಡಾ.ಸುಭಾಷಚಂದ್ರ ಕೌಲಗಿ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಇತರರಿದ್ದರು. 
ರಾಜ್ಯ

ತಂತ್ರಜ್ಞಾನದೊಂದಿಗೆ ಸದೃಢ ದೇಶ ಕಟ್ಟೋಣ

ಪ್ರಮುಖ ಮುಖ್ಯಾಂಶಗಳು

  • ಭೀಮನಗೌಡ ಕ್ಯಾತ್ನಾಳ ಹೇಳಿಕೆ
  • ಯಾದಗಿರಿಯಲ್ಲಿ ಇಂಜಿನಿಯರ್ಸ್ ದಿನ
ಯಾದಗಿರಿ: ಇಂಜಿನಿಯರ್ಸ್ ಎಂದರೆ ಜನರ ಕನಸುಗಳಿಗೆ ರೆಕ್ಕೆ ಕಟ್ಟಿ, ಅವರ ಮನದ ಅಮೂರ್ತ ಭಾವನೆಗಳಿಗೆ ಮೂರ್ತ ರೂಪ ನೀಡುವ ಆಧುನಿಕ ಶಿಲ್ಪಿಗಳು ಎಂದು ಕನ್ಸಲ್ಟಿಂಗ್ ಸಿವಿಲ್ ಇಂನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಭೀಮನಗೌಡ ಕ್ಯಾತ್ಯಾಳ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಲಿಂ.ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣದಲ್ಲಿ ಮಂಗಳವಾರ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನಿಂದ ಹಮ್ಮಿಕೊಂಡ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ೧೬೫ನೇ ಜನ್ಮದಿನ ಹಾಗೂ ಇಂಜಿನಿಯರ್ಸ್ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಜಿನಿಯರಿಂಗ್ ಎಂಬುದು ಕೇವಲ ವೃತ್ತಿಯಲ್ಲ, ಅದು ಸಾಮಾಜಿಕ ಜವಾಬ್ದಾರಿಯಾಗಿದೆ. ವಿಶ್ವೇಶ್ವರಯ್ಯನವರ ಜನ್ಮದಿನ ನಮಗೆಲ್ಲರಿಗೂ ಹಬ್ಬವಿದ್ದಂತೆ. ಅವರ ಶಿಸ್ತು, ಪ್ರಾಮಾಣಿಕತೆ ಮತ್ತು ದೂರದೃಷ್ಟಿಯನ್ನು ನಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದು ಜಗತ್ತು ಎಐ, ಗ್ರೀನ್ ಬಿಲ್ಡಿಂಗ್, ಸ್ಮಾರ್ಟ್ ಕನ್ಸ÷್ಟçಕ್ಷನ್‌ನಂತಹ ಹೊಸ ತಂತ್ರಜ್ನಾನಗಳತ್ತ ದಾಪುಗಾಲು ಇಡುತ್ತಿದೆ. ನಾವು ಕೂಡ ಆ ತಂತ್ರಜ್ನಾನವನ್ನು ಪಡೆದು ಕಡಿಮೆ ವೆಚ್ಚದಲ್ಲಿ, ಹೆಚ್ಚು ಬಾಳಿಕೆ ಬರುವ ಮತ್ತು ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರಾಚಾರ್ಯ ಡಾ.ಸುಭಾಶಚಂದ್ರ ಕೌಲಗಿ, ಸರ್.ಎಂ.ವಿಶ್ವೇಶ್ವರಯ್ಯರಂತಹ ಮೇಧಾವಿಗಳು ಇಂಜಿನಿಯರ್‌ಗಳಾಗಿ ಮಾಡಿದ ಕಾರ್ಯ ಸಾವಿರಾರು ವರ್ಷಗಳ ಕಾಲ ಸ್ಮರಣೀಯವಾಗಿರುತ್ತದೆ. ಆಧುನಿಕ ತಂತ್ರಜ್ನಾನ ಇಲ್ಲದಿದ್ದ ವೇಳೆ ತಮ್ಮ ಅಪಾರ ಬುದ್ಧಿಶಕ್ತಿಯಿಂದ ಕಟ್ಟಿದ ಕನ್ನಂಬಾಡಿ ಅಣೆಕಟ್ಟು ಸೇರಿ ಹಲವು ಕಟ್ಟಡಗಳು ಇಂದಿಗೂ ಸದೃಢವಾಗಿ ನಾಡಿನ ಹಿರಿಮೆಯ ಸಂಕೇತವಾಗಿ ಉಳಿದಿವೆ ಎಂದರು.
ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ದೇಶದ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದಾಗಿದೆ ಎಂದರು. ಲಯಮ್ಸ್ ಕ್ಲಬ್ ಅಧ್ಯಕ್ಷ ಡಾ.ಸಿದ್ಧರಾಜ ರೆಡ್ಡಿ ಮಾತನಾಡಿದರು. ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಗಿರೀಶಕುಮಾರ ಗುಡ್ಡಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ದಿನೇಶಕುಮಾರ ಜೈನ, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ರಾಮಶೆಟ್ಟಿ, ನಗರಸಭೆಯ ಅಭಿಯಂತರ ರಾಕೇಶರೆಡ್ಡಿ ಮುದನೂರ ಇದ್ದರು. ಕಾರ್ಯದರ್ಶಿ ಇರ್ಫಾನ್ ಬಾದಲ್ ಸ್ವಾಗತಿಸಿದರು. ಇಂಜಿನಿಯರ್ ರಾಮಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಕರಬಸಯ್ಯ ಸ್ವಾಮಿ ದಂಡಗಿಮಠ ನಿರೂಪಿಸಿದರು.

ವಚನ-ಭಾವಗೀತೆಗಳ ಗಾಯನ

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಖ್ಯಾತ ಯುವ ಗಾಯಕರಾದ ಬೂದಯ್ಯ ಸ್ವಾಮಿ ಹಿರೇಮಠ, ಮಹೇಶ ಶಿರವಾಳ, ರಾಜಶೇಖರ ಗೆಜ್ಜಿ ಅವರಿಂದ ವಚನ-ಭಾವಗೀತೆ ಗಾಯನ ನಡೆಯಿತು. ಜಿಲ್ಲೆಯಾ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಇಂಜಿನಿಯರ್‌ಗಳು, ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸತ್ಕರಿಸಲಾಯಿತು. ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಶಚಂದ್ರ ವಾಲಿ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು, ಬೈತುಲ್ ಮಾಲ್ -ಫಂಕ್ಷನ್ ಹಾಲ್ ಅಧ್ಯಕ್ಷ ಇರ್ಫಾನ್ ಬಾದಲ್, ಶಶಿ ಚಾರಿಟೇಬಲ್ ಟ್ರಸ್ಟ್ನ ಹಣಮಂತಪ್ಪ ಶಿರಗೋಳ, ಮುಖ್ಯ ಗುರುಗಳಾದ ಬಸವರಾಜಪ್ಪ, ಮುಕುಂದರಾವ್, ಲಿಂಗನಗೌಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರೇರಣಾ ತಿಪ್ಪಶೆಟ್ಟಿ ಮತ್ತು ಅಂಕಿತ್‌ರಾಜ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು.