ಅಫಜಲಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಜಯ ಗುರುಶಾಂತಲಿಂಗಾರಾಧ್ಯ ಶಿವಾಚಾರ್ಯರು, ಶಾಮಾಚಾರ್ಯ, ಗುರುಸಿದ್ದಯ್ಯ ಹಿರೇಮಠ, ಎನ್.ಜಿ.ದೇಗಾಂವ ಇತರರಿದ್ದರು.
- ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿ
- ಅಫಜಲಪುರದಲ್ಲಿ ಗುರುವಂದನೆ
ಅಫಜಲಪುರ: ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು, 3 ದಶಕಗಳ ಬಳಿಕ ತಮಗೆ ಅಕ್ಷರ ನೀಡಿದ ಶಿಕ್ಷಕರನ್ನು ನೆನೆದು ಗೌರವ ಸಲ್ಲಿಸುತ್ತಿರುವುದು ಮಾದರಿ ಕಾರ್ಯ ಎಂದು ಮಳೇಂದ್ರ ಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ 1997&98ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿತ ಶಾಲೆ, ಪಾಠ ಹೇಳಿಕೊಟ್ಟ ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ತಮ್ಮ ಬದುಕಿಗೆ ದಾರಿ ತೋರಿದ ಗುರುಗಳ ಋಣ ತೀರಿಸಲು ಒಗ್ಗೂಡಿರುವ ನಿಮ್ಮ ನಡೆ ನಿಜಕ್ಕೂ ಅನುಕರಣೀಯ ಎಂದರು.
ಶ್ರೀ ಜಯಗುರುಶಾಂತಲಿಂಗಾರಾಧ್ಯ ಶಿವಾಚಾರ್ಯ, ಪ್ರಮುಖರಾದ ಶಾಮಾಚಾರ್ಯ, ಗುರುಸಿದ್ದಯ್ಯ ಹಿರೇಮಠ, ಎನ್.ಜಿ.ದೇಗಾಂವ್, ಎಸ್.ಎಂ.ಕಾಮಗೊಂಡ, ಎಸ್.ಎಸ್.ದೇವೂರ, ಮುನೀರ್ ಪಟೇಲ್, ಆರ್.ಜಿ.ದೇಸಾಯಿ, ಹಣಮಂತ ಅವಟೆ, ರಾಜಶೇಖರ ಜೋಗೂರ, ರಾವೇಂದ್ರ ಚಿನಿವಾರ, ಗುಂಡು ಅಂಬೂರೆ, ಸಿದ್ಧರಾಮ ರಾಣಿ, ಭೀಮಾಶಂಕರ ಪತ್ತಾರ, ಅನೀಲ್ ಸಿಂಪಿ, ಚಂದ್ರಕಾಂತ ಸಿಂಗೆ, ಶಿವಾನಂದ ಅವಟೆ, ಬೋಗಪ್ಪ ಆಸಂಗಿಹಾಳ, ಗಾಯತ್ರಿ ಮಹಾಮನಿ, ವಿದ್ಯಾ ನಾಟೀಕಾರ, ಅನುರಾಧಾ, ಪ್ರೀತಿ ಆಲಮೇಲಕರ, ಗೀತಾ ಬಯಾಸ, ಸುಶೀಲ್ ಅಗ್ನಿಹೋತ್ರಿ, ಗಂಗಾ ಪಾಟೀಲ್ ಇತರರಿದ್ದರು.