ಅಫಜಲಪುರದ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಎಂ.ವೈ.ಪಾಟೀಲ್ ಅವರು ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.
- ಶಾಸಕ ಎಂ.ವೈ.ಪಾಟೀಲ್ ಅಭಿಮತ
- ಕಲಬುರಗಿ ಜಿಲ್ಲಾದ್ಯಂತ ಸ್ವಾತಂತ್ರ್ಯ ಸಂಭ್ರಮ
ಅಫಜಲಪುರ: ದೇಶವನ್ನು ಪರಕಿಯರಿಂದ ಮುಕ್ತಗೊಳಿಸಲು ಯಾವುದೇ ಫಲಾಪೇವಿಲ್ಲದೆ ಹೋರಾಡಿದ ಸ್ವಾತಂತ್ರ್ಯ ಸೇನಾನಿಗಳನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ದೇಶದ ಐಕ್ಯತೆ, ಅಖಂಡತೆ ಹಾಗೂ ಸಂವಿಧಾನವನ್ನು ಬಲಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜಾತಿ, ಧರ್ಮ, ಭಾಷೆ ಹಾಗೂ ಪ್ರದೇಶಗಳ ಭಿನ್ನತೆಯಿದ್ದರೂ ಸೌಹಾರ್ದ ಕಾಪಾಡಿ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಕಲಬುರಗಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಅಫಜಲಪುರ-ದೇವಲಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯ ಚಂದ್ರಶೇಖರ ಕರಜಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪ್ರಭುಗೌಡ ಪಾಟೀಲ್, ತಾಪಂ ಮಾಜಿ ಉಪಾಧ್ಯ ಶಿವಾನಂದ ಗಾಡಿಸಾಹುಕಾರ, ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಸಂಜೀವ ಬಗಲಿ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಪ್ರಮುಖರಾದ ಮತೀನ್ ಪಟೇಲ್, ಮೋಶಿನ್ ಪಟೇಲ್, ರಮೇಶ ಪೂಜಾರಿ, ಶ್ರೀಮಂತ ಬಿರಾದಾರ ಇತರರಿದ್ದರು.
ಕರಜಗಿ: ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಚನ್ನಬಸಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಮಹಮ್ಮದ್ ಶಫಿ, ಸಿದ್ದಪ್ಪ ಗೋಪಗೊಂಡ, ಗಫುರ್ ಮಸಳಿ, ಅಭಿಷೇಕ ರೋಡಗಿ, ದತ್ತು ಜಾನಕರ್, ಕಲ್ಯಾಣಿ ಬಬಲಾದ ಇತರರಿದ್ದರು.