ಕುಲಗೋಡ ಗ್ರಾಮದ ಎನ್​ಎಸ್​ಎ್​ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್​ ಮಟ್ಟದ ಕ್ರೀಡಾಕೂಟವನ್ನು ಎಸ್​.ಬಿ.ಹಳಿಗೌಡರ ಉದ್ಘಾಟಿಸಿದರು. ಎಚ್​.ಬಿ.ಪಾಟೀಲ, ಎಸ್​.ಪಿ.ಕಬ್ಬೂರಮಠ ಇತರರಿದ್ದರು. 
ರಾಜ್ಯ

ಸೋಲು-ಗೆಲುವು ಸಮವಾಗಿ ಸ್ವೀಕರಿಸಲಿ

ಕುಲಗೋಡ: ಕ್ರೀಡೆ ಕೇವಲ ಮನರಂಜನೆ ಅಲ್ಲ, ಆಟೋಟಗಳು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿಯಾಗಿದೆ ಎಂದು ತಾಲೂಕು ದೈಹಿಕ ಶಿಣಾಧಿಕಾರಿ ಎಸ್​.ಬಿ.ಹಳಿಗೌಡರ ಹೇಳಿದರು.

ಗ್ರಾಮದ ಎನ್​ಎಸ್​ಎ್​ ಶಾಲಾ ಮೈದಾನದಲ್ಲಿ ಸರಸ್ವತಿ ನವೋದಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕ್ಲಸ್ಟರ್​ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಆಟಗಳಲ್ಲಿ ಸೋಲು-&ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಿ ಉಲ್ಲಾಸ ಮೂಡಿಸುತ್ತದೆ. ರಕ್ತ ಸಂಚಾರ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರೀಡೆ ಸಹಕಾರಿ ಎಂದರು.

ಚಂದ್ರಶೇಖರ ಹಿರೇಮಠ, ಸದಾಶಿವ ಬಡಕಲ, ಮಲ್ಲಿಕಾರ್ಜುನ ತಿಪ್ಪಿಮನಿ ಇತರರಿದ್ದರು.