ಬಸವಕಲ್ಯಾಣದ ರಥ ಮೈದಾನದ ಸಭಾ ಭವನದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವವನ್ನು ಎಂಎಲ್​ಸಿ ಎಂ.ಜಿ.ಮುಳೆ ಉದ್ಘಾಟಿಸಿದರು. ಡಾ.ನಿಲಾಂಬಿಕಾ ಶೇರಿಕಾರ, ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಸಿಪಿಐ ಅಲಿಸಾಬ್​, ಮನೋಜಕುಮಾರ ಕಾಂಬಳೆ, ಸಂಜುಕುಮಾರ ಕಾಂಗೆ, ವಿಜಯಕುಮಾರ ರಡ್ಡಿ,  
ರಾಜ್ಯ

ಮಲ್ಲಮ್ಮ ಚರಿತ್ರೆ ಕುರಿತು ಸಂಶೋಧನೆ ನಡೆಯಲಿ

ಪ್ರಮುಖ ಮುಖ್ಯಾಂಶಗಳು

  • ಡಾ.ನೀಲಾಂಬಿಕಾ ಶೇರಿಕಾರ ಆಶಯ
  • ಕಲ್ಯಾಣದಲ್ಲಿ ಜಯಂತ್ಯುತ್ಸವ
ಬಸವಕಲ್ಯಾಣ: ಬಸವಾದಿ ಶರಣರ ಕಾಯಕ ಭೂಮಿ ಕಲ್ಯಾಣಕ್ಕೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು 14ನೇ ಶತಮಾನದಲ್ಲಿ ಬಂದಿರುವ ಸಾಧ್ಯತೆವಿದ್ದು, ಈ ಕುರಿತು ಸಂಶೋಧನೆ ನಡೆಯಬೇಕು ಎಂದು ಕಲಬುರಗಿಯ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾಯೆರ್ ಡಾ.ನೀಲಾಂಬಿಕಾ ಶೇರಿಕಾರ ಹೇಳಿದರು.
ನಗರದ ರಥ ಮೈದಾನದ ಸಭಾ ಭವನದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ವಿಶೇಷ ಉಪಪ್ಯಾಸ ನೀಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಕಲ್ಯಾಣಕ್ಕೆ ದೇಶ ವಿದೇಶದಿಂದ ಶರಣರು ಬಂದಿದ್ದರು. 14ನೇ ಶತಮಾನದಲ್ಲಿ ಹೇಮರಡ್ಡಿ ಮಲ್ಲಮ್ಮನವರು ಇಲ್ಲಿ ಬಂದಿರುವ ಕುರಿತು ಭಜನ ಪದಗಳಲ್ಲಿ ಉಲ್ಲೇಖವಾಗಿದೆ. ಅವರ ಚರಿತ್ರೆ ಮತ್ತು ಭೇಟಿ ನೀಡಿದ ಸ್ಥಳಗಳ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದರು.
ಜೀವನದಲ್ಲಿ ಎದುರಾದ ಕಷ್ಟಗಳನ್ನು ಮೆಟ್ಟಿನಿಂತು ಅಚಲವಾದ ಭಕ್ತಿ, ದಯೆ, ಕಾಯಕ ಹಾಗೂ ದಾಸೋಹ ತತ್ವವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ. ಮನುಕುಲದ ಹಿತ ಬಯಸಿದ ಅವರು ವಿಶ್ವ ಕುಟುಂಬದ ಸಂದೇಶ ನೀಡಿದ್ದಾರೆ. ಭಜನೆ ಜಾನಪದ ಸಾಹಿತ್ಯದಲ್ಲಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಅವರ ಆದರ್ಶಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಜಯಂತಿ ಅಚರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್​ ಸದಸ್ಯ ಎಂ.ಜಿ.ಮುಳೆ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಿಪಿಐ ಅಲಿಸಾಬ್​, ನಗರಸಭೆಯ ಎಇಇ ಮನೋಜಕುಮಾರ ಕಾಂಬಳೆ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಂಜುಕುಮಾರ ಕಾಂಗೆ, ರಡ್ಡಿ ಸಮಾಜದ ತಾಲೂಕಾಧ್ಯಕ್ಷ ವಿಜಯಕುಮಾರ ರಡ್ಡಿ ಇದ್ದರು. ಹೇಮರಡ್ಡಿ ಗೌರೆ ಅತಿಥಿ ಪರಿಷಯ ಮಾಡಿಕೊಟ್ಟರು. ಸರ್ಕಾರಿ ನೌಕರರ ಸಂದ ನಿರ್ದೇಶಕ ಶಿವಕುಮಾರ ಜಡಗೆ ನಿರೂಪಣೆ ಮಾಡಿದರು.
ಮೆರವಣಿಗೆ : ಕಾರ್ಯಕ್ರಮಕ್ಕೂ ಮುನ್ನ ನಗರದ ಕೋಟೆಯಿಂದ ಗಾಂಧಿ ವೃತ್ತ, ಬಸವ ವೃತ್ತ, ಅಂಬೇಡ್ಕರ್​ ವೃತ್ತದ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ರಥ ಮೈದಾನದ ಸಭಾ ಭವನದವರೆಗೆ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಭವ್ಯ ಮೆರವನಿಗೆ ಜರುಗಿತು. ಮೆರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಬಿಸಿಎಂ ಅಧಿಕಾರಿ ರವೀಂದ್ರ ಮೇತ್ರೆ, ಎಇಇ ರಮೇಶ ಪಾಟೀಲ್​, ಪ್ರಮುಖರಾದ ವಿಜಯಕುಮಾರಡ್ಡಿ, ಮಹಾದೇವ ರಡ್ಡಿ, ಸಂಜುರಡ್ಡಿ ಯರಬಾಗ, ನರಸಿಂಗರಡ್ಡಿ ಗದಲೆಗಾಂವ, ರಾಜರಡ್ಡಿ, ನಾಗೇಂದ್ರರಡ್ಡಿ, ಬಾಲಾಜಿರಡ್ಡಿ, ಪ್ರಕಾಶರಡ್ಡಿ, ಸುಧಾಕರರಡ್ಡಿ, ತಾತೇರಾವ ಪಾಟೀಲ್​ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಪ್ರಮುಖರು ಭಾಗವಹಿಸಿದ್ದರು.