ಸುರಪುರ ನಗರದ ಜಯಲಾಲ್​ ಮೊಹಲ್ಲಾದ ಪರಂಕುಶ ಮಠದಲ್ಲಿ ಭಾನುವಾರ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು. 
ರಾಜ್ಯ

ರಕ್ತದಾನದಂತ ಶಿಬಿರಗಳು ಹೆಚ್ಚಲಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ವೈದ್ಯಾಧಿಕಾರಿ ಆರ್​ವಿಎನ್​ ಸಲಹೆ
  • > ಪರಂಕುಶ ಮಠದಲ್ಲಿ ಕಾರ್ಯಕ್ರಮ
ಸುರಪುರ
ರಕ್ತದಾನ ಎಂಬುದು ಎಲ್ಲ ದಾನಕ್ಕಿಂತಲೂ ಮಿಗಿಲಾದದ್ದು, ಇಂತಹ ಶಿಬಿರಗಳು ಎಲ್ಲೆಡೆ ಹೆಚ್ಚಳವಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್​.ವಿ.ನಾಯಕ ಹೇಳಿದರು.
ನಗರದ ಜಯಲಾಲ್​ ಮೊಹಲ್ಲಾದ ಸ್ವಾಮಿ ಪರಂಕುಶ ಮಠದಲ್ಲಿ ವಾಲ್ಮೀಕಿ ಆರ್​.ಸಿ.ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್​ ಮತ್ತು ಆರೋಗ್ಯ ಇಲಾಖೆಯಹಿಂದ ಭಾನುವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಕ್ತದಾನ ಮಾಡಿದರೆ ಬೇರೊಬ್ಬರಿಗೆ ಜೀವದಾನ ಮಾಡಿದಂತೆ. ಯುವ ಜನತೆ ರಕ್ತದಾನ ಮಾಡುವುದಕ್ಕೆ ಮುಂದೆ ಬರಬೇಕು. ಅಲ್ಲದೆ ಶಾಸಕರ ಸಹೋದರ ರಾಜಾ ಸಂತೋಷ ನಾಯಕ ಅವರು ರಕ್ತದಾನ ಮಾಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.
ರಕ್ತದಾನ ಎಂಬುದು ದಾನಗಳಲ್ಲಿಯೇ ಶ್ರೇಷ್ಠವಾದ ದಾನ. ರಕ್ತದಾನವು ರಕ್ತ ಬೇಕಾಗಿರುವ ರೋಗಿಗಳಿಗೆ ಜೀವದಾನ ಮಾಡುವ ಒಂದು ಒಳ್ಳೆಯ ಸಂಪ್ರದಾಯವಾಗಿದೆ ಎಂದರು.
ಆರೋಗ್ಯವಂತರು ರಕ್ತದಾನ ಕೊಡುವುದರಿಂದ ಅವರ ದೇಹದಲ್ಲಿ ಮತ್ತೆ ರಕ್ತವೂ ಉತ್ಪತ್ತಿಯಾಗಿ ಆರೋಗ್ಯದಿಂದ ಮತ್ತು ಲವಲವಿಕೆಯಿಂದ ಇರಬಹುದು. ಪ್ರತಿ ಹನಿ ರಕ್ತ ಮತ್ತೊಬ್ಬರ ಜೀವದ ಉಸಿರಾಗಲಿ. ಜೀವ ಉಳಿಸುವ ಕಾಯಕಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ರಾಜಾ ವೇಣುಗೋಪಾಲ ನಾಯಕ ಶಿಬಿರ ಉದ್ಘಾಟಿಸಿದರು. ಮಹರ್ಷಿ ವಾಲ್ಮೀಕಿ ಆರ್​.ಸಿ.ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್​ ಅಧ್ಯಕ್ಷ ರಾಜಾ ಚನ್ನಪ್ಪ ನಾಯಕ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ರಾಜಾ ಸಂತೋಷ ನಾಯಕ, ಡಾ.ಎಂ.ಎಂ.ಬೋಡೆ, ಡಾ.ಎಂ.ಎಸ್​.ಕನಕರೆಡ್ಡಿ ಸೇರಿ ಇತರರಿದ್ದರು. ಯುವ ಮುಖಂಡ ರಾಜಾ ಸಂತೋಷ ನಾಯಕ ಅವರು ಸ್ವತ@ ರಕ್ತದಾನ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾದರು.
"

ಶಿಬಿರದಲ್ಲಿ ರಕ್ತದಾನ ಮಾಡುವುದರ ಮೂಲಕ ಮತ್ತೊಬ್ಬರ ಜೀವಕ್ಕೆ ನೆರವಾಗಬೇಕು. ರಕ್ತದಾನದ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತಾಗಬೇಕು.

— > ರಾಜಾ ವೇಣುಗೋಪಾಲ ನಾಯಕ ಶಾಸಕ ಸುರಪುರ