Let there be a comprehensive investigation into the Bashettihalli Town Panchayat scam.
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂ. ಹಗರಣ ನಡೆದಿರುವ ಬಗ್ಗೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಒಂದು ವಾರದಿಂದಲೂ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇಷ್ಟೊಂದು ದೊಡ್ಡ ತನಿಖೆ ಬಗ್ಗೆ ಇದುವರೆಗೂ ೇತ್ರದ ಶಾಸಕ ಧೀರಜ್ ಮುನಿರಾಜು ಅವರು ಒಂದೇ ಒಂದು ಪ್ರತಿಕ್ರಿಯೆ ನೀಡದಿರುವುದನ್ನು ನೋಡಿದರೆ ಅಕ್ರಮದಲ್ಲಿ ಇವರ ಪಾತ್ರವೂ ಇರುವ ಅನುಮಾನವಿದೆ ಎಂದು ಟಿಎಪಿಎಂಸಿಎಸ್ ನಿರ್ದೇಶಕ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ 3 ವರ್ಷಗಳಿಂದಲೂ ಚುನಾಯಿತ ಸದಸ್ಯರಿಲ್ಲದೇ ತಹಸೀಲ್ದಾರ್ ಆಡಳಿತಾಧಿಕಾರಿಗಳಾಗಿದ್ದು, ಅಧಿಕಾರಿಗಳದೇ ರಾಜ್ಯಭಾರವಾಗಿತ್ತು. ಪಪಂ ವ್ಯಾಪ್ತಿಯಲ್ಲಿ ಹತ್ತಾರು ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನಡೆಸಿದ್ದಾರೆ. ಆದರೆ ಇದುವರೆಗೂ ಕಾಮಗಾರಿ ನಡೆಸದೆ ಇಲ್ಲಿಂದ ವರ್ಗಾವಣೆಗೊಂಡಿರುವ ಮುಖ್ಯಾಧಿಕಾರಿ ನರಸಿಂಹಮೂರ್ತಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ನಕಲಿ ಬಿಲ್ಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ದೂರು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡುವ ೇತ್ರದ ಶಾಸಕರ ಅಣತಿಯಂತೆ ಆಡಳಿತ ನಡೆಯುತ್ತಿತ್ತು. ಹಾಗಾಗಿ ಹಗರಣಗಳಲ್ಲಿ ಶಾಸಕರ ಪಾತ್ರವೂ ಇದೆ ಎಂದು ಪಟ್ಟಣ ಪಂಚಾಯಿತಿ ಕಾರ್ಯಾಲಯ ಮುಂದೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದರು.
ರಸ್ತೆ, ಚರಂಡಿ ಕಾಮಗಾರಿಗಳು ನಡೆದಿರುವ ಬಗ್ಗೆ ಬಿಲ್ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಕೆಲಸಗಳೇ ನಡೆದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಸಂಗ್ರಹಣ ಮಾಡಿರುವ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಲಾಗಿದೆ. ನಮ್ಮದು ಲಂಚಮುಕ್ತ ಆಡಳಿತ ಎಂದು ಹೇಳಿಕೊಳ್ಳುವ ಶಾಸಕರು ಬಾಶೆಟ್ಟಿಹಳ್ಳಿಯಲ್ಲಿ ಕಾಮಗಾರಿಗಳನ್ನೇ ನಡೆಸದೆ ಗುತ್ತಿಗೆದಾರರು ಹಣ ಪಡೆದಿರುವುದು ಮಾತ್ರ ಇವರ ಗಮನಕ್ಕೆ ಬಂದಿಲ್ಲವೇ? ಎಂದು ಅಂಬರೀಶ್ ಪ್ರಶ್ನಿಸಿದರು.
ೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ನೀಡುತ್ತಿಲ್ಲ ಎಂದು ದೂರುತ್ತಾರೆ. ಆದರೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ವಾರ್ಷಿಕ ಸುಮಾರು 5 ಕೋಟಿ ರೂ. ಗೂ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ. ಈ ಹಣದಲ್ಲಿಯೇ ಸಾಕಷ್ಟು ಕೆಲಸಗಳನ್ನು ಮಾಡಿಸುವ ಅವಕಾಶ ಇದೆ. ಆದರೆ, ಈ ಹಣವನ್ನು ಅಧಿಕಾರಿಗಳು ಸ್ವಾಹ ಮಾಡಿದ್ದಾರೆ ಎಂದು ದೂರಿದರು.
3 ವರ್ಷಗಳಿಂದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿದ್ದ ನರಸಿಂಹಮೂರ್ತಿ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇವೆ. ಇಲ್ಲಿನ ನಕಲಿ ಬಿಲ್ಗಳ ಹಗರಣ ನೋಡಿ ಲೋಕಾಯುಕ್ತರೇ ಆಶ್ಚರ್ಯ ಪಡುತ್ತಿದ್ದಾರೆ. ಹತ್ತು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಸಿದರೂ ಇನ್ನೂ ತನಿಖೆ ಮುಕ್ತಾಯವಾಗಿಲ್ಲ ಎಂದು ಅಂಬರೀಶ್ ಹೇಳಿದರು.