ಇಂಡಿ ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಹಾಗೂ ನಾಡಿನ ಸಾಧಕ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಯುವಕರು ರಕ್ತದಾನ ಮಾಡಿದರು. ಅನೀಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಎಸ್.ಎ. ಪಾಟೀಲ, ಕಾಸುಗೌಡ ಬಿರಾದಾರ, ಬಿ.ಡಿ. ಪಾಟೀಲ ಇತರರಿದ್ದರು. 
ರಾಜ್ಯ

ಯುವಕರು ಸಾಮಾಜಿಕ ಕಾರ್ಯಕ್ಕೆ ಮುಂದಾಗಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹೇಳಿಕೆ
  • ಬೃಹತ್ ರಕ್ತದಾನ ಶಿಬಿರ
ಇಂಡಿ: ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಯಲು ಸಹಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಅಪಘಾತಗಳಾಗಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು ಹೆಚ್ಚಿಗೆ ಯುವ ಜನಾಂಗ ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಲು ಸಹಕರಿಸಬೇಕು ಎಂದು ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.
ಬಸವ ಸಮಿತಿ ಅನೀಲಗೌಡ ಬಿರಾದಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮುಖಂಡ ಸುನೀಲಗೌಡ ಬಿರಾದಾರ ನೇತೃತ್ವದಲ್ಲಿ ಇಂತಹ ರಕ್ತದಾನ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭ ಸೇರಿ ವಿವಿಧ ಸಾಮಾಜಿಕ ಕಾರ್ಯಗಳಾಗುತ್ತಿದ್ದು ಅವರು ಸಾಮಾಜಿಕವಾಗಿ ಇನ್ನಷ್ಟು ಬೆಳೆಯುತ್ತಾರೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿ, ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡುವ ಕಾರ್ಯ ಎಲ್ಲರೂ ಮಾಡಬೇಕು. ಯುವಕರು ಸಾಮಾಜಿಕ ಕಾರ್ಯಕ್ಕೆ ನೂರಕ್ಕೂ ಹೆಚ್ಚು ಜನರಿಗೆ ರಕ್ತ ಸಿಕ್ಕು ಪ್ರಾಣ ಉಳಿಸಬಹುದಾಗಿದೆ ಎಂದರು. ರಕ್ತದಾನದಲ್ಲಿ 75 ಯೂನಿಟ್ ರಕ್ತ ಸಂಗ್ರಹವಾಯಿತು. 50 ಕ್ಕೂ ಹೆಚ್ಚು ರೈತರಿಗೆ ಸತ್ಕರಿಸಿ ಗೌರವಿಸಲಾಯಿತು.
ಎಸ್.ಎ. ಪಾಟೀಲ, ಕಾಸುಗೌಡ ಬಿರಾದಾರ, ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ, ಜಗದೀಶ ಕ್ಷತ್ರಿ, ಅನೀಲ ಜಮಾದಾರ, ದೇವೆಂದ್ರ ಕುಂಬಾರ, ಸುಭಾಸ ಹಿಟ್ನಳ್ಳಿ, ಭೀಮಾಶಂಕರ ಪ್ರಚಂಡಿ, ದಯಾನಂದ ಪಾಟೀಲ, ಬಾಳು ಮುಳಜಿ, ಭೀಮನಗೌಡ ಬಿರಾದಾರ, ಆನಂದ ಕಾಂಬಳೆ, ದುಂಡು ಬಿರಾದಾರ, ನಾಗುಗೌಡ ಪಾಟೀಲ, ಶಿವಾನಂದ ಚಾಳಿಕಾರ, ಅವಿನಾಶ ಬಗಲಿ, ಮಹೇಶ ಹೂಗಾರ ಇತರರಿದ್ದರು.