ಬ್ಯಾಕೋಡ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು. ರಾಮನಗೌಡ ಹಾದಿಮನಿ, ಸಂಗನಗೌಡ ಕೊಳೂರ, ಗುರಲಿಂಗಪ್ಪ ಪಡಸಲಗಿ, ಶಿವಶರಣ ನಾಗರೆಡ್ಡಿ ಮತ್ತಿತರರಿದ್ದರು.
- ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕಿವಿಮಾತು
- ಗ್ರಾಮ ಘಟಕದ ಉದ್ಘಾಟನೆ
ಹೂವಿನಹಿಪ್ಪರಗಿ: ಇಂದಿನ ಯುವಕರು ರಾಜಕಾರಣಿಗಳ ಬೆನ್ನು ಹತ್ತಿ ತಮ್ಮ ಸುಂದರ ಬದುಕನ್ನು ಹಾಳು ಮಾಡಿಕೊಳ್ಳದೆ ನಮ್ಮ ಮೂಲ ಕಷಿ ಸಂಸ್ಕೃತಿಯನ್ನು ಉಳಿಸಲು ಯುವಕರು ಕಷಿ ಕಾಯಕಕ್ಕೆ ಮುಂದಾಗಿ ಒಕ್ಕಲುತನವನ್ನು ಉಳಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಯುವಕರಿಗೆ ಕಿವಿಮಾತು ಹೇಳಿದರು.
ಬ್ಯಾಕೋಡ ಗ್ರಾಮದಲ್ಲಿ ಶನಿವಾರದಂದು ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಕರು ಸರ್ಕಾರಿ ನೌಕರಿ ಆಸೆ ಬಿಟ್ಟು ಪ್ರತಿಯೊಬ್ಬರು ಕೃಷಿಯಲ್ಲಿ ಆಸಕ್ತಿ ವಹಿಸಿಕೊಳ್ಳಬೇಕು. ಇಂದಿನ ವಿಜ್ಞಾನ ಯುಗದಲ್ಲಿ ಯಂತ್ರೋಪಕರಣಗಳು ಬಂದು ಹಿಂದಿನ ಕೃಷಿ ಸಂಸ್ಕೃತಿ ವಿನಾಶದ ಅಂಚಿಗೆ ತಲುಪಿದೆ, ಆದ್ದರಿಂದ ಯುವಕರು ಕೃಷಿಗೆ ಮುಂದಾಗಿ ಹಿಂದಿನ ಒಕ್ಕಲುತನ ಕೃಷಿ ಸಂಸ್ಕೃತಿ ಮತ್ತೆ ಮರುಕಳಿಸುವಂತಾಗಬೇಕೆಂದು ಯುವಕರಿಗೆ ಕರೆ ನೀಡಿದರು.
ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ ಮಾತನಾಡಿ, ರೈತ ಸಂಘಟನೆಗಳ ಹೋರಾಟದ ಲದಿಂದ ರೈತರ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಹೋರಾಟವಿಲ್ಲದೆ ರೈತರ ಯಾವ ಸಮಸ್ಯೆಗಳೂ ಇತ್ಯರ್ಥವಾಗುವುದಿಲ್ಲ ಹಾಗಾಗಿ ರೈತರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದರೆ ಸಮಸ್ಯೆ ಬಗೆಹರಿಸುವುದು ಸುಲಭವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಉಮೇಶ ವಾಲಿಕಾರ ಪ್ರಾಸ್ತಾವಿಕ ಮಾತನಾಡಿದರು.
ತಾಳಿಕೋಟೆ ರೈತ ಸಂಘದ ತಾಲೂಕು ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಸಂಗನಗೌಡ ಕೊಳೂರ, ಗುರಲಿಂಗಪ್ಪ ಪಡಸಲಗಿ, ಶಿವಶರಣ ನಾಗರೆಡ್ಡಿ, ಸಾಯಬಗೌಡ ಹೊಸ್ಸೂರ, ಬಸವರಾಜ ನಾಗರೆಡ್ಡಿ, ಸಂಗನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ ಇತರರಿದ್ದರು. ಹೆರೂರ ಗ್ರಾಮ ಘಟಕದ ಅಧ್ಯಕ್ಷರಾಗಿ ಬಸವರಾಜ, ಉಪಾಧ್ಯಕ್ಷರಾಗಿ ಜುಮ್ಮಣ್ಣ ವಾಲಿಕಾರ, ಬಸನಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಬಸನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.