ದೇಶದ ಪ್ರಗತಿಗೆ ಯುವಶಕ್ತಿ ಬಳಕೆಯಾಗಲಿ youth power 
ರಾಜ್ಯ

ದೇಶದ ಪ್ರಗತಿಗೆ ಯುವಶಕ್ತಿ ಬಳಕೆಯಾಗಲಿ youth power

ಪ್ರಮುಖ ಮುಖ್ಯಾಂಶಗಳು

  • ಡಿಆರ್​ಡಿಒ ಮುಖ್ಯಕಚೇರಿಯ ನಿರ್ದೇಶಕಿ ಎನ್​.ರಂಜನ ಸಲಹೆ
  • ನಾಗಾರ್ಜುನ ಕಾಲೇಜಲ್ಲಿ ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ಗೆ ಚಾಲನೆ
ಚಿಕ್ಕಬಳ್ಳಾಪುರ: ದೇಶದ ಅಭಿವೃದ್ಧಿಗೆ ಸಮರ್ಪಕ ರೀತಿಯಲ್ಲಿ ಯುವಶಕ್ತಿಯ ಸದ್ಬಳಕೆಯಾಗಬೇಕು ಎಂದು ನವದೆಹಲಿ ಡಿಆರ್​ಡಿಒ ಮುಖ್ಯಕಚೇರಿಯ ನಿರ್ದೇಶಕಿ ಎನ್​.ರಂಜನ ಸಲಹೆ ನೀಡಿದರು. youth power
ತಾಲೂಕಿನ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಇಂಜಿನಿಯರಿಂಗ್​ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ & 2025ಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಸಮಸ್ಯೆಯನ್ನು ಒಂದು ಆಯಾಮದಿಂದ ಬಗೆಹರಿಸಲು ಸಾಧ್ಯವಾಗದಿರಬಹುದು. ಆದರೆ, ಬಹುಶಿಸ್ತೀಯ ಆಯಾಮಗಳಿಂದ ಯಶಸ್ವಿಯಾಗಬಹುದು ಎಂದರು.
ನಾಗಾರ್ಜುನ ಇಂಜಿನಿಯರಿಂಗ್​ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಿಒಒ ಭಾನು ಚೈತನ್ಯಾ ವರ್ಮಾ ಮಾತನಾಡಿ, ಪ್ರತಿಯೊಬ್ಬ ಸ್ಪರ್ಧಿಯೂ ಪ್ರಾಯೋಗಿಕ ಮತ್ತು ತಂತ್ರಾನ ಕೌಶಲವನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕಿದೆ ಎಂದರು.
ವಾಲ್​ಮಾರ್ಟ್​ ಇಂಡಿಯಾ ಲಿಮಿಟೆಡ್​ನ ಇಂಜಿನಿಯರಿಂಗ್​ ಲೀಡರ್​ ರಾಧಾಕೃಷ್ಣನ್​ ಮಾತನಾಡಿ, ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಆವಿಷ್ಕಾರ ಶಕ್ತಿಯನ್ನು ಹೊರಜಗತ್ತಿಗೆ ತೋರಿಸಬೇಕು. ಸದಾ ಎಚ್ಚರವಾಗಿ, ಯೋಚಿಸಿ ಮರು ಯೋಚಿಸಿ, ಕೋಡಿಂಗ್​ ಹಾಗೂ ರಿಕೋಡಿಂಗ್​ ಮಾಡುವುದು ಬಹಳ ಮುಖ್ಯ ಎಂದರು.
ಟಿಸಿಎಸ್​ ಕಂಪನಿಯ ಪ್ರಿನ್ಸಿಪಲ್​ ಸೈಂಟಿಸ್ಟ್​ ಎಂ.ಎ.ರಾಜನ್​ ಮಾತನಾಡಿ, ಾನಕ್ಕೆ ಸಮನಾದ ಶಕ್ತಿ ಮತ್ತೊಂದಿಲ್ಲ. ನಿರಂತರ ಚುರುಕುತನದ ಮೂಲಕ ಅತ್ಯುತ್ತಮ ಸಾಧನೆಗಳನ್ನು ತೋರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗಾರ್ಜುನ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್ಸ್​ನ ನಿರ್ದೇಶಕ ಎ.ಜಿ.ಗೋಪಾಲಕೃಷ್ಣ, ಎನ್​ಸಿಇಟಿ ಪ್ರಾಂಶುಪಾಲ ತಿಪ್ಪೇಸ್ವಾಮಿ, ಆಡಳಿತ ಮಂಡಳಿ ಪ್ರಮುಖ್​ ಕಿಶನ್​, ಕಾಲೇಜಿನ ದಾಖಲಾತಿ ವಿಭಾಗದ ಶಿಬು, ಯೋಗೇಶ, ಸರ್ವೇಶ್​, ಗೋಪಿನಾಥ್​, ಲೋಹಿತ್​, ವೆಂಕಟೇಶ್​, ಗೋವರ್ಧನಸ್ವಾಮಿ, ಕೆ.ಕೆ.ಮಹೇಶ್​ ಇತರರು ಇದ್ದರು.
11 ರಾಜ್ಯಗಳಿಂದ ಭಾಗಿ: ದೇಶಾದ್ಯಂತ ಲಾಂತರ ಯುವಜನರು ಸ್ಮಾರ್ಟ್​ಇಂಡಿಯಾ ಹ್ಯಾಕಥಾನ್​ನಲ್ಲಿ ಭಾಗವಹಿಸಿ, ನಾಗಾರ್ಜುನ ಇಂಜಿನಿಯರಿಂಗ್​ ಕಾಲೇಜಿನ ಕಾರ್ಯಕ್ರಮಕ್ಕೆ 11 ರಾಜ್ಯಗಳಿಂದ 120 ವಿದ್ಯಾರ್ಥಿಗಳು ಆಗಮಿಸಿದ್ದರು.