ಸೇಡಂ ತಾಲೂಕು ಕ್ರೀಡಾಂಗಣದಲ್ಲಿ ಆರ್ಆರ್ ಚಾಂಪಿಯನ್ಸ್ ಸೀಸನ್-3 ಪ್ರೀಮಿಯರ್ ಲೀಗ್ಗೆ ಸಿಪಿಐ ಮಹಾದೇವ ದಿಡ್ಡಿಮನಿ ಚಾಲನೆ ನೀಡಿದರು. ಅಬ್ದುಲ್ ರಸೀದ್ ರಂಜೋಳ, ವೀರೇಂದ್ರ ರುದ್ನೂರ, ಶಿವಾನಂದಸ್ವಾಮಿ, ಅಬ್ದುಲ್ ಹಫೀಜ್ ರಂಜೋಳ ಇದ್ದರು. ===
- ಸಿಪಿಐ ಮಹಾದೇವ ದಿಡ್ಡಿಮನಿ ಅನಿಸಿಕೆ
- ಆರ್ಆರ್ ಚಾಂಪಿಯನ್ಸ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ
ಸೇಡಂ: ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುವುದರ ಜತೆಗೆ ಬೌದ್ಧಿಕ ಮಟ್ಟ ವೃದ್ಧಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಸಿಪಿಐ ಮಹಾದೇವ ದಿಡ್ಡಿಮನಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಆರ್ಆರ್ ಚಾಂಪಿಯನ್ಸ್ ಸೀಸನ್&3 ಪ್ರೀಮಿಯರ್ ಲೀಗ್ಗೆ ಮಂಗಳವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಯುವಕರನ್ನು ವ್ಯಸನದಿಂದ ದೂರವಿಡಲು ಕ್ರೀಡೆಗಳು ಸಹಾಯಕವಾಗಿವೆ. ಮೊಬೈಲ್, ಕಂಪ್ಯೂಟರ್ ಗೇಮ್ಗಳನ್ನು ಬಿಟ್ಟು, ಖೋಖೋ, ಕಬಡ್ಡಿ, ವಾಲಿಬಾಲ್ನಂತಹ ಆಟಗಳಲ್ಲಿ ತೊಡಗಸಿಕೊಳ್ಳಬೇಕು. ಕ್ರಿಕೆಟ್ ಇಂದಿನ ಯುವಕರ ಅಚ್ಚುಮೆಚ್ಚಿನ ಆಟವಾಗಿದೆ. ಕ್ರಿಕೆಟ್ ಜತೆಗೆ ದೇಶಿಯ ಕ್ರಿಡೆಗಳಿಗೆ ಉತ್ತೇಜನ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಪುರಸಭೆ ಮಾಜಿ ಉಪಾಧ್ಯಕ್ಷ ಶಿವಾನಂದಸ್ವಾಮಿ ಮಾತನಾಡಿ, ಸೇಡಂನ ಯುವಕರು ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಅವಶ್ಯಕತೆ ಇತ್ತು. ಅದನ್ನು ಕಲ್ಪಿಸಿಕೊಡುವ ಕೆಲಸ ಆಯೋಜಕ ಹಫೀಜ್ ಮಾಡಿದ್ದಾರೆ. ಇದು ಹೀಗೆ ನಿರಂತರವಾಗಿ ನಡೆಯಲಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ, ಮಾಜಿ ಸದಸ್ಯರಾದ ಅಬ್ದುಲ್ ರಸೀದ್ ರಂಜೋಳ, ಹಾಜಿ ನಾಡೇಪಲ್ಲಿ, ದೇವು ದೊರೆ, ಪ್ರಮುಖರಾದ ಯೂನೂಸ್ ಸವೇರಾ, ಈರಣ್ಣಗೌಡ ರೆಮ್ಮಣ್ಣಿ, ದೀಪಕ್ ಎಂ.ಜಿ., ಎಂ.ಡಿ.ಸುಲೇಮಾನ್, ಖಾಸೀಂಸಾಬ್ ಊಡಗಿ, ವಿಷ್ಣು ಊಡಗಿ, ರಾಬೀನ್ಸನ್ ಹೋಸಳ್ಳಿಕರ್, ಮಂಜುನಾಥ, ಸೋಮಶೇಖರ ಬಿಬ್ಬಳ್ಳಿ, ಬಸವರಾಜ ಹೊಸಮನಿ ಇತರರಿದ್ದರು.
ಅಬ್ದುಲ್ ಹಫೀಜ್ ರಂಜೋಳ, ಆಯೋಜಕ, ಆರ್ಆರ್ ಚಾಂಪಿಯನ್ಸ್ ಪ್ರೀಮಿಯರ್ ಲೀಗ್
ನಮ್ಮ ಭಾಗದ ಕ್ರೀಡಾಸಕ್ತರಿಗೆ ಸೂಕ್ತ ವೇದಿಕೆ ಕೊರತೆಯಿದೆ. ಸ್ಥಳಿಯ ಜನಪ್ರತಿನಿಧಿಗಳು ಪಾತೀತವಾಗಿ ಒಗ್ಗೂಡಿ ಸ್ಥಳಿಯ ಪ್ರತಿಬೆಗಳನ್ನು ಪೋತ್ಸಾಹಿಸುವ ಕೆಲಸ ಮಾಡಬೇಕಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಆ ಮೂಲಕ ಇಲ್ಲಿನ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು.