ದೇವರಹಿಪ್ಪರಗಿ ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಪಜಾ-ಪಪಂಗಳ ಕುಂದುಕೊರತೆ ಸಭೆಯಲ್ಲಿ ಪಿಎಸ್‌ಐ ಪ್ರೇಮಾ ಚೌರ ಮಾತನಾಡಿದರು. ಸಾಯಿಕುಮಾರ ಬಿಸನಾಳ, ವಿಠಲ ದೇಗಿನಾಳ, ಬಾಲಚಂದ್ರ ಗುಡ್ಡಳ್ಳಿ, ನಬಿಸಾಬ್ ಮುಲ್ಲಾ, ಕಾಂತಪ್ಪ ಕನ್ನೊಳ್ಳಿ ಮತ್ತಿತರರಿದ್ದರು. 
ರಾಜ್ಯ

ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲಿ

ಪ್ರಮುಖ ಮುಖ್ಯಾಂಶಗಳು

  • ಪಿಎಸ್‌ಐ ಪ್ರೇಮಾ ಚೌರ ಹೇಳಿಕೆ
  • ಪಜಾ ಪಪಂಗಳ ಕುಂದು ಕೊರತೆ ಸಭೆ
ದೇವರಹಿಪ್ಪರಗಿ: ಸಂವಿಧಾನದ ಆಶೋತ್ತರಗಳ ಈಡೇರಿಕೆಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಭೆ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಕುಂದುಕೊರತೆ ಆಲಿಸಿ ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆ ಪಿಎಸ್‌ಐ ಪ್ರೇಮಾ ಚೌರ ಹೇಳಿದರು.
ಸಮೀಪದ ಕಡೇವಾಡ ಪಿಸಿಎಚ್ ಗ್ರಾಮದಲ್ಲಿ ಪ.ಜಾ, ಪ,ಪಂಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಪ.ಜಾ, ಪ.ಪಂಗಳ ಸಮುದಾಯದವರೊಂದಿಗೆ ಬೆರೆತು ಅಗತ್ಯ ಕಾನೂನು ವಿಚಾರಗಳ ಜಾಗೃತಿ ಮೂಡಿಸುವುದರ ಜತೆಗೆ ಸಂವಿಧಾನದ ಆಶೋತ್ತರಗಳ ಈಡೇರಿಕೆಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಭೆ ನಡೆಸಿ ಕುಂದುಕೊರತೆ ಆಲಿಸಿ ಪರಿಹಾರ ಕೈಗೊಳ್ಳಲಾಗುತ್ತಿದೆ. ಸಮುದಾಯದ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದರು. ಉತ್ತಮ ಶಿಕ್ಷಣವಂತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಸಾಯಿಕುಮಾರ ಬಿಸನಾಳ ಮಾತನಾಡಿ, ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮತನ ಮರೆಯಬಾರದು. ಗ್ರಾಮದ ಹಿಂದುಳಿದ ವರ್ಗಗಳ ಮಹಿಳೆಯರಿಗಾಗಿ ಶೌಚಗೃಹ ನಿರ್ಮಾಣ ಅಗತ್ಯವಿದೆ ಎಂದು ತಿಳಿಸಿದರು.
ಸರ್ಕಾರ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ತಡೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ವಿಠಲ ದೇಗಿನಾಳ, ಬಾಲಚಂದ್ರ ಗುಡ್ಡಳ್ಳಿ, ನಬಿಸಾಬ್ ಮುಲ್ಲಾ, ಕಾಂತಪ್ಪ ಕನ್ನೊಳ್ಳಿ, ಶರಣಪ್ಪ ಹಂಗರಗಿ, ಶ್ರೀಶೈಲ ದಳವಾಯಿ, ಶಿವಪ್ಪ ಅಂಗಡಿ, ಯಲ್ಲಪ್ಪ ಹೊಸಮನಿ, ಸಾಯಬಣ್ಣ ಹತ್ತರಕಿಹಾಳ, ಭೀಮಾಶಂಕರ ಮಂಗಳೂರ, ಸಿದ್ದವ್ವ ಪೂಜಾರಿ, ಮೀನಾಕ್ಷಿ ವಾಡೆ, ಕಲ್ಲವ್ವ ಮಾದರ, ಸಿಬ್ಬಂದಿ ಸಿದ್ದು ಗಂಗನಳ್ಳಿ ಇತರರಿದ್ದರು.