ಶ್ರೀನಿವಾಸಪುರ ತಾಲೂಕು Hindu Social Festival ರೋಣೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಮುನೇಶ್​ ಸ್ವಾಮೀಜಿ, ಮಾಜಿ ಸಂಸದ ಮುನಿಸ್ವಾಮಿ, ಸರ್ಕಾರದ ಮಾಜಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಡಾ. ವೇಣುಗೋಪಾಲ್​, ಚಿನ್ನಪ್ಪ ರೆಡ್ಡಿ, ಶಿವಣ್ಣ ಇದ್ದರು. 
ರಾಜ್ಯ

ಯುವಕರು ಧರ್ಮ ಉಳಿವಿಗಾಗಿ ಮುಂದಾಗಲಿ Hindu Social Festival

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕಿ ನಿಶಾ ಯೋಗೇಶ್ವರ್​ ಹೇಳಿಕೆ
ಶ್ರೀನಿವಾಸಪುರ: ಸನಾತನ ಹಿಂದೂ ಧರ್ಮಕ್ಕೆ ತನ್ನದೇ ಆದ ಪರಂಪರೆ, ಇತಿಹಾಸ ಇದೆ. ಧರ್ಮವನ್ನು ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು ಎಂದು ಬೆಂಗಳೂರಿನ ಸಮಾಜ ಸೇವಕಿ ನಿಶಾ ಯೋಗೇಶ್ವರ್​ ತಿಳಿಸಿದರು.
ತಾಲೂಕಿನ ರೋಣೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿ, ಈ ಭೂಮಿಯಲ್ಲಿ ಮನುಷ್ಯರೆಲ್ಲರಿಗೂ ಒಂದೇ ಗಾಳಿ, ನೀರು ಅವಶ್ಯಕತೆ ಇದೆ. ಮನುಷ್ಯರಲ್ಲಿ ಇರುವುದು ಒಂದೇ ರಕ್ತ. ಅವರವರ ಧಾರ್ಮಿಕ ವೈಚಾರಿಗಳಿಗೆ ಸಂಬಂಧಿಸಿದಂತೆ ಧರ್ಮದ ಮೇಲೆ ಪ್ರೀತಿ ಭಕ್ತಿ ಇರುವುದು ಸಹಜ. ನಮ್ಮ ಹಿಂದೂ ಧರ್ಮ ಬಹುದೇವರ ಆರಾಧನೆಯಿಂದ ಕೂಡಿದೆ. ಪ್ರತಿಯೊಬ್ಬರಲ್ಲೂ ಭಕ್ತಿ ಇರಬೇಕು. ದೇಶ ಅಭಿಮಾನ ಬೆಳೆಯಬೇಕು ಎಂದರು.
ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಆರ್​.ಎನ್​ ಚಂದ್ರಶೇಖರ್​ ಮಾತನಾಡಿ, Hindu Social Festival ಹಿಂದೂ ಧರ್ಮಕ್ಕೆ ರಾಮಾಯಣ ಮಹಾಭಾರತ ಎರಡು ಮಹಾಕಾವ್ಯಗಳ ಸಾರಾಂಶ ನಮ್ಮ ಮಾನವ ಕೋಟಿಗೆ ದಾರಿ ದೀಪವಾಗಿದೆ. ಪ್ರತಿಯೊಬ್ಬರಲ್ಲಿ ದೇಶ ಅಭಿಮಾನ ಮೂಡಬೇಕು. ನಮ್ಮ ಸನಾತನ ಧರ್ಮ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ತಿಳಿಸಿದರು.
ಹಿರಿಯ ಮುಖಂಡ ಆನಂದಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದ, ರಾಣಿ ಲಕ್ಷಿ$್ಮಬಾಯಿ, ಕಿತ್ತೂರು ರಾಣಿ ಚನ್ನಮ್ಮ ಆದರ್ಶಗಳು&ತತ್ವಗಳು ಪಾಲಿಸಬೇಕು. ಸಮ ಸಮಾಜದ ನಿಮಾರ್ಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು. ಎಲ್ಲ ಸಮುದಾಯಗಳ ಸೌಹಾರ್ದತೆ ಸ್ನೇಹ ಸಮ್ಮಿಲನ ಮಾಡಿಕೊಂಡು ಮೌಡ್ಯ ಸಾಂಪ್ರದಾಯ ಮರೆತು ಮುಂದೆ ಸಾಗಬೇಕೆಂದು ತಿಳಿಸಿದರು.
ಗ್ರಾಮ ರಥ ಬೀದಿಗಳಲ್ಲಿ ತಾಯಿ ಭುವನೇಶ್ವರಿ ಭಾವಚಿತ ಮೆರವಣಿಗೆ ಮಾಡಲಾಯಿತು. ವಕೀಲ ನಾಗರಾಜ್​, ರಘು, ಶಿಕ್ಷಕ ಆರ್​.ಎಸ್​ ರೆಡ್ಡಪ್ಪ ಇದ್ದರು.