ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮರ್ಥ ಭಾರತ ಶ್ರೇಷ್ಠ ಸಂತಾನ ಸಂಕಲ್ಪ ಕಾರ್ಯಕ್ರಮವನ್ನು ತಾರಾ ಕಾಳಿಚರಣ ಉದ್ಘಾಟಿಸಿದರು. ಡಾ.ನಂದಿನಿ ಬೋಸಗಿ, ಡಾ.ರತ್ನಶ್ರೀ ರೇಮಣ್ಣಿ ಇದ್ದರು.
- ತಾರಾ ಕಾಳಿಚರಣ ಆಶಯ
- ಸೇಡಂನಲ್ಲಿ ಸಮರ್ಥ ಭಾರತ ಶ್ರೇಷ್ಠ ಸಂತಾನ ಸಂಕಲ್ಪಕ್ಕೆ ಚಾಲನೆ
ಸೇಡಂ: ಮಕ್ಕಳು ಆಧುನಿಕತೆಗೆ ಮಾರು ಹೋಗಿ ದಾರಿ ತಪ್ಪುತ್ತಿರುವ ಪ್ರಕರಣ ಹೆಚ್ಚು ಕಂಡು ಬರುತ್ತಿವೆ. ಹೀಗಾಗಿ ಮಗುವಿಗೆ ಒಳ್ಳೆಯ ಸಂಸ್ಕಾರ ನೀಡಿ, ಸಮಾಜಕ್ಕೆ ವರವಾಗುವಂತೆ ತಾಯಿಯಾದವಳು ಬೆಳೆಸಬೇಕಿದೆ ಎಂದು ವಿದ್ಯಾಭಾರತಿ ಶಿಶು ವಾಟಿಕಾ ದಣ ಮಧ್ಯ ೇತ್ರೀಯ ಸಹ ಸಂಯೋಜಕಿ ತಾರಾ ಕಾಳಿಚರಣ ಹೇಳಿದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಮರ್ಥ ಭಾರತ ಶ್ರೇಷ್ಠ ಸಂತಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸತಿ&ಪತಿಗಳು ಬುದ್ಧ, ಬಸವ, ಸಿದ್ಧರಾಮ, ಶಿವಾಜಿ, ವಿವೇಕಾನಂದ ಸೇರಿ ಮಹಾನ್ ಸಂತರಂತಹ ಸಂತಾನವನ್ನು ನೀಡು ಎಂದು ಭಗವಂತನಲ್ಲಿ ಬೇಡುವವರಾಗಬೇಕು. ಭಕ್ತಿ, ಸಮರ್ಪಣಾ ಭಾವ, ಶಿಸ್ತು, ಸಹನೆ, ಸಂಯಮಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ನೀಡುವ ಕೆಲಸ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.
ಡಾ.ರತ್ನಶ್ರೀ ರೇಮಣ್ಣಿ ಮಾತನಾಡಿ, ಗರ್ಭಿಣಿಯರಿಗೆ ಸರಿಯಾದ ಆಹಾರ ಬಹಳ ಮುಖ್ಯ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಮತೋಲನ ಆಹಾರದ ಜತೆಗೆ ಕಬ್ಬಿಣ, ಕ್ಯಾಲ್ಸಿಯಂಯುಕ್ತ ಆಹಾರ, ಹಣ್ಣು, ತರಕಾರಿ ಸೇವನೆ ಮಾಡಬೇಕು. ಜತೆಗೆ ಅವಶ್ಯಕ ಪ್ರಮಾಣದ ನೀರು ಸೇವನೆ ಮಾಡಬೇಕು. ಜಂಕ್ ಫುಡ್ ಸಹವಾಸದಿಂದ ದೂರವಿರುವುದು ಅತ್ಯಂತ ಒಳ್ಳೆಯದು ಎಂದರು.
ಕಲಬುರಗಿಯ ಮಾತೃಛಾಯಾ ಆಸ್ಪತ್ರೆ ಪ್ರಸೂತಿ ಮತ್ತು ಸಿರೋಗ ತೆ ಡಾ.ನಂದಿನಿ ಬೋಸಗಿ ಮಾತನಾಡಿ, ದಂಪತಿಗಳಲ್ಲಿ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಹಾಗೂ ನಿಮ್ಮ ಮಕ್ಕಳ ದೈಹಿಕ ಸಮಸ್ಯೆಗಳ ಕಡೆ ಹೆಚ್ಚು ಗಮನ ಹರಿಸಬೇಕೆಂದು ಎಂದು ಅಭಿಪ್ರಾಯಪಟ್ಟರು.
ವಿದ್ಯಾಮಂದಿರ ಶಾಲೆ ಮಕ್ಕಳು ಪ್ರಾರ್ಥಿಸಿದರು. ಸಂಸ್ಥೆ ಕಾರ್ಯದರ್ಶಿ ಅನುರಾಧಾ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶೋಭಾ ಪಾಟೀಲ್ ನಿರೂಪಣೆ ಮಾಡಿ, ಸ್ವಾಗತಿಸಿದರು. ಶಿಕ್ಷಕಿ ಸ್ನೇಹಲತಾ ಭಾಗೋಡಿ ವಂದಿಸಿದರು.