ಗುಳೇದಗುಡ್ಡ ಸಮೀಪದ ಕೆಲವಡಿ ಗ್ರಾಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಗೌಡರ, ಮುತ್ತಪ್ಪ ತಳವಾರ, ಚಿದಾನಂದ ಭಗವತಿ, ಮುತ್ತನಗೌಡ ಗೌಡರ, ಚಂದ್ರಶೇಖರ ಕೂಡಗಿ, ರವಿ ತಳವಾರ ಇತರರಿದ್ದರು.
- ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿಕೆ
- ಕೆಲವಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಗುಳೇದಗುಡ್ಡ: ಕ್ಷೇತ್ರದ ಪ್ರತಿ ಗ್ರಾಮದ ಬೇಡಿಕೆ, ಸಮಸ್ಯೆಗಳನ್ನು ಒಂದೇ ಬಾರಿಗೆ ಬಗೆಹರಿಸಲು ಸಾಧ್ಯವಿಲ್ಲ. ಅನುದಾನದ ಲಭ್ಯತೆಯ ಮೇಲೆ ಹಂತಹಂತವಾಗಿ ಗ್ರಾಮಗಳ ಅವಶ್ಯಕತೆ ಅನುಗುಣವಾಗಿ ಯೋಜನೆಗಳನ್ನು ತಂದು ಗ್ರಾಮದ ಬೇಡಿಕೆ, ಸಮಸ್ಯೆಗಳನ್ನು ಬಗೆಹರಿಸುವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ
ಸಮೀಪದ ಕೆಲವಡಿ ಗ್ರಾಮದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅಂದಾಜು 90 ಲಕ್ಷ ರೂ. ವೆಚ್ಚದಲ್ಲಿ ಕೆಲವಡಿ- ನೀರಲಕೇರಿ ರಾಷ್ಟ್ರೀಯ ಹೆದ್ದಾರಿ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮದ ಎಲ್ಲ ಸಮಸ್ಯೆಗಳನ್ನು ಶಾಸಕನ ಮೇಲೆ ಹಾಕದೇ ಗ್ರಾಮಸ್ಥರು ಜವಾಬ್ದಾರಿ ಹೊರಬೇಕು. ಶಾಲೆಯಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮದ ಮುಖಂಡರೇ ನೋಡಿಕೊಂಡು ಬಗೆಹರಿಸಬೇಕು. ಅದಕ್ಕೆ ಎಂಎಲ್‌ಎನೇ ಬರಬೇಕಿಂದಿಲ್ಲ. ನಿಮ್ಮ ಮಕ್ಕಳೇ ಅಲ್ಲಿ ಓದುತ್ತಾರೆ ಅಂದರೆ ನಿಮ್ಮ ಗ್ರಾಮದ ಶಾಲೆಯ ಬಗ್ಗೆ ನೀವು ಜವಾಬ್ದಾರಿ ವಹಿಸಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯ ಅಡಿವೆಪ್ಪ ಹಡಗಲಿ, ಸಿದ್ದು ಕೋಲಾರ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಗೌಡರ, ಮುತ್ತಪ್ಪ ತಳವಾರ, ಚಿದಾನಂದ ಭಗವತಿ, ಮುತ್ತನಗೌಡ ಗೌಡರ, ಚಂದ್ರಶೇಖರ ಕೂಡಗಿ, ರವಿ ತಳವಾರ ಇತರರಿದ್ದರು.