ಹಗರಿಬೊಮ್ಮನಹಳ್ಳಿಯಲ್ಲಿ ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಪಿ.ಬಸವನಗೌಡ, ಪ್ರಮುಖರಾದ ಸಾಲ್ಮೂರಳ್ಳಿ ಹನುಮಜ್ಜ, ಮಲ್ಲಿಕಾರ್ಜುನ, ಸುಜಾತಮ್ಮ ಇತರರಿದ್ದರು. 
ರಾಜ್ಯ

ದರ ಏರಿಕೆ ನಿಯಂತ್ರಿಸಲಿ

JAGADEESH KUMBAR
ಹಗರಿಬೊಮ್ಮನಹಳ್ಳಿ: ರಸಗೊಬ್ಬರ, ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ರೈತ ಸಂಘದಿಂದ ತಾಲೂಕು ಆಡಳಿತ ಸೌಧದ ಬಳಿ ಬುಧವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಶಿವಕುಮಾರ ಗೌಡಗೆ ಮನವಿ ಸಲ್ಲಿಸಲಾಯಿತು. 
ಸಂಘದ ತಾಲೂಕು ಅಧ್ಯಕ್ಷ ಪಿ.ಬಸವನಗೌಡ ಮಾತನಾಡಿ, ಕಳೆದ ಕೆಲವು ತಿಂಗಳಿಂದ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.
 ಕೃಷಿ ಭೂಮಿ ಉಳುಮೆ, ನೀರಾವರಿ ಪಂಪ್‌ಸೆಟ್ ಬಳಕೆ ಮತ್ತು ಬೆಳೆ ಸಾಗಾಣಿಕೆ ವೆಚ್ಚ ಹೆಚ್ಚಾಗಿದೆ. 
ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಬಿತ್ತನೆ ಮಾಡುವುದೇ ದುಸ್ತರವಾಗಿದೆ. ಬೆಲೆ ಏರಿಕೆೆ ನಿಯಂತ್ರಣಕ್ಕೆ ತರಬೇಕು ಎಂದು ಒತ್ತಾಯಿಸಿದರು. ಕಲೀಲ್ ಬಾಷಾ, ಸಾಲ್ಮೂರಳ್ಳಿ ಹನುಮಜ್ಜ ಇತರರಿದ್ದರು.