ಕಿಕ್ಕೇರಿ ಸಮೀಪದ ಮಾಕವಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಶಾಸಕ ಎಚ್.ಟಿ. ಮಂಜು ವಿತರಿಸಿದರು. ಸುಷ್ಮಾ, ಶಿವಕುಮಾರ್, ದೀಪಕ್, ಮಂಜುನಾಥ್, ಭೈರಯ್ಯ ಮತ್ತಿತರರಿದ್ದರು. 
ರಾಜ್ಯ

ಜನಪರ ಯೋಜನೆ ಅರ್ಹರಿಗೆ ನೇರವಾಗಿ ತಲುಪಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ.ಮಂಜು
  • ಮಾಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ
ಕಿಕ್ಕೇರಿ: ಈ ಬಾರಿ ಮಳೆಗಾಲ ಮರೆಯಾಗಿ ಅಂತರ್ಜಲ ಕುಸಿತವಾಗಿರುವುದರಿಂದ ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಶಾಸಕ ಎಚ್.ಟಿ.ಮಂಜು ನೀಡಿದರು.
ಸಮೀಪದ ಮಾಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಯೋಜನೆಗಳ ವಿವಿಧ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಜನಪರ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅರ್ಹರು, ದುರ್ಬಲರಿಗೆ ತಲುಪಿಸುವ ಮೂಲಕ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಮಹಿಳೆಯರು ಸ್ವಾವಲಂಬನೆಯಿಂದ ಬದುಕಲು, ಕುಟುಂಬ ನಿರ್ವಹಣೆಗೆ ಟೇಲರಿಂಗ್ ಉಪಯೋಗಿಯಾಗಿದೆ. ಟೇಲರಿಂಗ್‌ಗೆ ನಗರ ಪ್ರದೇಶಗಳಲ್ಲಿ ವಿಫುಲ ಅವಕಾಶವಿದೆ. ಹೊಲಿಗೆ ಯಂತ್ರವನ್ನು ಮಾರಾಟ ಮಾಡದೆ ಶ್ರದ್ಧೆಯಿಂದ ಕಸುಬನ್ನು ವೃತ್ತಿಯನ್ನಾಗಿಸಿಕೊಂಡರೆ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದರು.
ರಾಜ್ಯಾದ್ಯಾಂತ ವಾಡಿಕೆಗಿಂತ ಕಡಿಮೆಯಾಗಿರುವುದರಿಂದ ಮಳೆಗಾಲವೇ ಬೇಸಿಗೆ ಕಾಲವಾದಂತಿದೆ. ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದ್ದು, ಕೆರೆಕಟ್ಟೆಗಳಲ್ಲಿ ನೀರು ಹಿಂಗದಂತೆ ಕಾಳಜಿವಹಿಸಿದರೆ ರೈತರ ಕೊಳವೆಬಾವಿಯಲ್ಲಿ ಅಂರ್ತಜಲ ವೃದ್ಧಿಸಲಿದೆ. ಜಲಸಂರಕ್ಷಣೆಯಿಂದ ಮಾತ್ರ ಪ್ರಸಕ್ತ ವರ್ಷ ಬೇಸಿಗೆಯನ್ನು ಆತ್ಮಸೈರ್ಯದಿಂದ ಎದುರಿಸಬಹುದಾಗಿದೆ ಎಂದು ಹೇಳಿದರು.
ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಅಂಗವಿಕಲರಿಗೆ ಸಹಾಯಧನ ಹಾಗೂ ಶವಸಂಸ್ಕಾರ ಧನಸಹಾಯ ಚೆಕ್‌ಗಳನ್ನು ವಿತರಿಸಲಾಯಿತು. ಕೆ.ಆರ್.ಪೇಟೆ ತಾಪಂ ಇಒ ಸುಷ್ಮಾ, ಪಿಡಿಒ ಶಿವಕುಮಾರ್, ಆಡಳಿತಾಧಿಕಾರಿ ದೀಪಕ್, ಮುಖಂಡರಾದ ಮಂಜುನಾಥ್, ಭೈರಯ್ಯ, ಅಲೋಕ್ ಕುಮಾರ್, ಅಣ್ಣೇಗೌಡ, ಹರೀಶ್, ವೆಂಕಟೇಶ್, ಜಿ.ನಾಗೇಶ್, ಬಲರಾಮೇಗೌಡ, ಸುಕಂದರಾಜು, ಎಂ.ಆರ್.ಮಂಜುನಾಥ್, ಮಂಜೇಗೌಡ, ರಜನಿ, ಚಲುವರಾಜು, ಮನೋಜ್, ಪ್ರದೀಪ್, ಯೋಗೇಶ್, ದೇವರಾಜು ಮತ್ತಿತರರಿದ್ದರು.