ಕಲಾದಗಿಯಲ್ಲಿ ಹೆರಕಲ್ ಏತ ನೀರಾವರಿ (ದಕ್ಷಿಣ)ಯೋಜನೆಯ ಕಳಸಕೊಪ್ಪ ಕೆರೆ ತುಂಬುವ ಕಾರ್ಯಕ್ಕೆ ಶಾಸಕ ಜೆ.ಟಿ. ಪಾಟೀಲ ಚಾಲನೆ ನೀಡಿದರು. ಮುಖಂಡರಾದ ಎಂ.ಬಿ. ಸೌದಾಗರ, ಸಂಗಣ್ಣ ಮುಧೋಳ, ಪಾಂಡು ಪೊಲೀಸ್ ಇತರರಿದ್ದರು. 
ರಾಜ್ಯ

ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಟಿ. ಪಾಟೀಲರಿಂದ ಸೂಚನೆ
  • ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಎಂಟು ಕೆರೆಗಳಿಗೆ ನೀರು

ಕಲಾದಗಿ: ನಮ್ಮ ರೈತರ ಜೀವನಾಡಿಯಾದ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಕೆರೆಗಳಿಗೆ ಶೀಘ್ರವಾಗಿ ನೀರು ಹರಿಸಬೇಕು ಎನ್ನುವ ಸದುದ್ದೇಶದಿಂದ ಇಲ್ಲಿದ್ದ ಟಿಸಿ ಸುಟ್ಟರೂ ಹರಸಾಹಸ ಪಟ್ಟು ಅಲ್ಪ ಸಮಯದಲ್ಲಿಯೇ ಮತ್ತೊಂದು ಟಿಸಿ ತಂದು ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಗ್ರಾಮದ ಶೆಲ್ಲಿಕೇರಿ ಕ್ರಾಸ್‌ಬಳಿ ಇರುವ ಹೆರಕಲ್ ಏತ ನೀರಾವರಿ (ದಕ್ಷಿಣ) ಯೋಜನೆಯ ಜಾಕ್‌ವೆಲ್‌ನಲ್ಲಿ ಶುಕ್ರವಾರ ಸಂಜೆ ಪ್ರಸಕ್ತ ವರ್ಷದ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಎಂಟು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಕೆರೆಗಳು ತುಂಬುವವರೆಗೂ ನೀರೆತ್ತುವ ಯಂತ್ರಗಳನ್ನು ಯಾವುದೇ ಕಾರಣಕ್ಕೂ ಬಂದ್ ಆಗದಂತೆ ನೋಡಿಕೊಂಡು ಆದಷ್ಟು ಬೇಗ ಕೆರೆಗಳು ತುಂಬುವಂತಾಗಬೇಕು ಎಂದರು.
ಉದ್ದೇಶಿತ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಹಾಗೂ ಕಾಲುವೆ ಮೂಲಕ ನೀರು ಹರಿಸುವಲ್ಲಿ ಕೆಬಿಜೆಎನ್‌ಎಲ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಭರಮಲಿಂಗೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಸಂಗಣ್ಣ ಮುಧೋಳ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ. ಸೌದಾಗರ, ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಬಸವರಾಜ ಸಂಶಿ, ಮುಖಂಡರಾದ ಧರ್ಮಣ್ಣ, ಪಾಂಡು ಪೊಲೀಸ್, ಗಿರೀಶ ನಾಡಗೌಡ, ಬಸವರಾಜ ಗೊಡಚಿ, ಗಂಗಯ್ಯ ಸರಕರ, ಹಸನ್ಮಹದ ರೋಣ, ಯಲ್ಲಪ್ಪ ನಂದ್ಯಾಳ, ಮಲ್ಲಪ್ಪ ಜಮಖಂಡಿ, ಯಲ್ಲಪ್ಪ ಕುಳಗೇರಿ, ಮಂಜುಗೌಡ ಗೌಡರ, ಕೆ.ವ್ಹಿ. ನಾಡಗೌಡರ, ಕಲ್ಲಪ್ಪ ಯಂಡಿಗೇರಿ, ಕೆಬಿಜೆಎನ್‌ಎಲ್‌ನ ಎಸ್‌ಇ ಬಿ.ಎಸ್.ಪಾಟೀಲ, ಎಇಇ ವಿಶ್ವನಾಥ ನೀಲಣ್ಣವರ ಇತರರಿದ್ದರು.

"

ಟಿಸಿ ದುರಸ್ತಿಗೆ ಕ್ರಮ

ಇಲ್ಲಿದ್ದ ಟಿಸಿಯನ್ನು ಅದಷ್ಟು ಬೇಗ ದುರಸ್ತಿ ಮಾಡಿಸಲು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಿದ್ದು, ಇಲ್ಲಿನ ಜಾಕ್‌ವೆಲ್‌ಗೆ ಪರ್ಯಾಯ ಟಿಸಿ ಬೇಕೆಂಬ ಬೇಡಿಕೆಯ ಈಡೇರಿಕೆಗೂ ಕ್ರಮವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.