ಬೇಲೂರಿನ ಪುರಸಭೆ ಕಚೇರಿ ಮುಂದೆ ಕೆಆರ್‌ಎಸ್ ಪಕ್ಷದ ಮುಖಂಡು ಪ್ರತಿಭಟನೆ ನಡೆಸಿದರು. 
ರಾಜ್ಯ

ಒತ್ತುವರಿ ಜಾಗವನ್ನು ಪುರಸಭೆ ಸ್ವಾಧೀನಕ್ಕೆ ಪಡೆಯಲಿ

ಪ್ರಮುಖ ಮುಖ್ಯಾಂಶಗಳು

  • ಹೊಳೆ ಬೀದಿಯಲ್ಲಿ ಖಾಸಗಿ ಶಾಲೆಯವರು ಒತ್ತುವರಿ ಮಾಡಿರುವ ಪುರಸಭೆಗೆ ಸೇರಿದ ಜಾಗ
  • ಅಧಿಕಾರಿಗಳು ಸ್ವಾಧೀನಕ್ಕೆ ಪಡೆಯಬೇಕು

ಬೇಲೂರು:

ಪಟ್ಟಣದ ಹೊಳೆ ಬೀದಿಯಲ್ಲಿ ಖಾಸಗಿ ಶಾಲೆ

ಯವರು ಒತ್ತುವರಿ ಮಾಡಿರುವ ಪುರಸಭೆಗೆ ಸೇರಿದ ಜಾಗವನ್ನು ಅಧಿಕಾರಿಗಳು ಸ್ವಾಧೀನಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕೆಆರ್‌ಎಸ್ ಪಕ್ಷದ ತಾಲೂಕು ಪದಾಧಿಕಾರಿಗಳು ಪುರಸಭೆ ಕಚೇರಿ ಮುಂದೆ ಪ್ರತಿಭಟಿಸಿದರು.

ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಅಧ್ಯಕ್ಷ ಆದೇಶ ಲಿಂಗರಾಜು ಮಾತನಾಡಿ, ಹೊಯ್ಸಳ ಶಾಲೆಯವರು ಭಸ್ಮೀಕರಣ ಹೊಂಡದ 20 ಗುಂಟೆ ಹಾಗೂ ಪುರಸಭೆ ಖಾತೆಯ ಆಸ್ತಿ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕೆಂದು ಮನವಿ ಮಾಡಿದ್ದೆವು. ಆದರೆ ಪುರಸಭೆ ಅಧಿಕಾರಿಗಳು, ಶಾಸಕರು, ತಹಶೀಲ್ದಾರ್ ಜು.2 ರಂದು ನಮಕಾವಸ್ಥೆಗೆ ಸರ್ವೇ ಮಾಡಿ ಜನರ ಕಣ್ಣೊರೆಸುವ ಕೆಲಸ ಮಾಡಿದ್ದು ಬಿಟ್ಟರೆ, ಈವರೆಗೂ ಜಾಗ ತೆರವು ಗೊಳಿಸಿಲ್ಲ ಈ ವಿಷಯದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನವಿದೆ. ಜಾಗವನ್ನು ಅಧಿಕಾರಿಗಳು ವಶಕ್ಕೆ ಪಡೆಯದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರವಾದ ಹೋರಟಕ್ಕೆ ಮುಂದಾಗಲಿದ್ದೇವೆ ಎಂದರು.
ಸಾಮಾಜಿಕ ಹೋರಾಟಗಾರ ವೆಂಕಟೇಶ್ ಮಾತನಾಡಿ, ಶಾಲೆಯವರು ಒತ್ತುವರಿ ಮಾಡಿರುವ ಜಾಗವನ್ನು ಲೇಔಟ್‌ನವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಉಳಿಸಬೇಕು ಎಂದರು.
ಈ ಜಾಗವಲ್ಲದೆ ಪುರಸಭೆ ಜಾಗವೂ ಸಹ ಒತ್ತುವರಿಯಾಗಿದ್ದು, ಅದನ್ನು ಗುರುವಾರ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಕೆಆರ್‌ಎಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರ್ಷ, ಕಾರ್ಯಧ್ಯಕ್ಷ ಸಚಿನ್, ತಾಲೂಕು ಪ್ರದಾನ ಕಾರ್ಯದರ್ಶಿ ರಿಯಾಜ್ ಅಹಮ್ಮದ್, ಸಹ ಕಾರ್ಯದರ್ಶಿ ಯೋಗೇಶ್, ಅರೇಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಶಶಿಕಲಾ ಇದ್ದರು.