ಸಮಾಜದ ಕಟ್ಟಕಡೆಯ ವ್ಯಕ್ತಿಯು ಮುಖ್ಯವಾಹಿನಿಗೆ ಬರಲಿ mainstream
ಮಾಲೂರು: ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಂತೆ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ತಿಳಿಸಿದರು.mainstream
ನಗರದ ಅರಳೇರಿ ರಸ್ತೆಯಲ್ಲಿರುವ ನಿವಾಸದದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಆಟೋ ಚಾಲಕರಿಗೆ ಆಹಾರದ ಕಿಟ್ ಹಾಗೂ ಆಟೋಗಳಿಗೆ ಗ್ಯಾಸ್ ಕೂಪನ್ ಮತ್ತು ಚಾಲಕರ ಕುಟುಂಬದ ಮಕ್ಕಳಿಗೆ ಶಾಲೆಯ ಬ್ಯಾಗ್ ವಿತರಿಸಿ ಮಾತನಾಡಿ, ಆಟೋ ಚಾಲಕರಿಗೆ ಗ್ಯಾಸ್ ಅಭಾವ ಹೆಚ್ಚಾಗಿರುವುದರಿಂದ ಅವರ ಜೀವನ ಸಂಕಷ್ಟದಲ್ಲಿದೆ. ಆದ್ದರಿಂದ ಚಾಲಕರಿಗೆ ಸಹಕಾರ ನೀಡಬೇಕೆಂಬ ಉದ್ದೇಶದಿಂದ ಆಹಾರದ ಕೆಟ್ ವಿತರಿಸಲಾಗುತ್ತಿದೆ ಎಂದರು.
ಗೋಪಾಲ್ಗೌಡ, ಲಕ್ಷಿ$್ಮಕಾಂತ, ಶ್ರೀನಾಥ್, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ದೊಡ್ಡಕಲ್ಲಹಳ್ಳಿ ನಾರಾಯಣಸ್ವಾಮಿ ತಿಬ್ಬಯ್ಯ, ಗುಟ್ಲಪ್ಪ, ಚಲಪತಿ, ಕಿರಣ್, ಎಂ.ಎಲ್.ಆರ್.ರಾಮಮೂರ್ತಿ ಇದ್ದರು.