ದೇವನಹಳ್ಳಿ ಲಯನ್ಸ್ ಸಂಸ್ಥೆಯ 50ನೇ ವರ್ಷದ ನೆನಪಿಗಾಗಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಲಯನ್ಸ್ ಅಧ್ಯಕ್ಷ ಎಸ್.ಶಂಕರ್ ಅವರಿಗೆ ಹೊಸ ಕಾರು ಮತ್ತು ದಾಖಲಾತಿ ಹಸ್ತಾಂತರಿಸಿದರು.
ದೇವನಹಳ್ಳಿ : ಗ್ರಾಮೀಣ ಭಾಗದ ಬಡವರ ಬಾಳಿನ ಬೆಳಕಾಗಿ ಪ್ರತಿ ತಿಂಗಳೂ ನೇತ್ರಶಸ್ತ್ರ ಚಿಕಿತ್ಸೆ, ಆರೋಗ್ಯ ಶಿಬಿರಗಳಂತಹ ಸೇವಾಕಾರ್ಯಗಳನ್ನು ನಿರಂತರ ನಡೆಸಿಕೊಂಡು ಬಂದಿರುವ ದೇವನಹಳ್ಳಿ ಲಯನ್ಸ್ ಸೇವಾ ಸಂಸ್ಥೆ 50ನೇ ವಸಂತಕ್ಕೆ ಕಾಲಿಡುವ ಹೊತ್ತಿನಲ್ಲಿ ಮತ್ತಷ್ಟು ಜನಸೇವೆಗಳನ್ನು ವಿಸ್ತರಿಸಲಿ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆಶಿಸಿದರು.
ಸಂಸ್ಥೆಗೆ ಉಚಿತವಾಗಿ ಹೊಸ ಮಾರುತಿ ಇಕೋ ಕಾರನ್ನು ಕೊಡುಗೆಯಾಗಿ ಲಯನ್ಸ್ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದ ಮಾಜಿ ಶಾಸಕರು, 49 ವರ್ಷಗಳಿಂದ ಸಾವಿರಾರು ಜನರ ಆರೋಗ್ಯದಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ. ಹಲವರ ಬದುಕನ್ನು ಬೆಳಗಿಸಿದ ಲಯನ್ಸ್ನ 50ನೇ ವರ್ಷದ ಸವಿನೆನಪಿಗಾಗಿ ಈ ಕಾರನ್ನು ನೀಡಲಾಗುತ್ತಿದೆ. ಈ ಮೂಲಕ ಅವರು ತಾಲೂಕಿನ ಹಳ್ಳಿ ಹಳ್ಳಿಗಳಿಗೂ ತೆರಳಿ, ಸೇವಾ ಕಾರ್ಯಗಳನ್ನು ಪ್ರಚುರಪಡಿಸಿ, ರೋಗಿಗಳಿಗೆ ನೆರವಾಗಲಿ ಎಂದರು.
ಇದೇ ವೇಳೆ ನೂರಾರು ಮಹಿಳೆಯರಿಗೆ ಬಾಗಿನ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ವಿ.ಮಂಜುನಾಥ್, ತಾಲೂಕು ಯುವ ಘಟಕದ ಟಿ.ರವಿ, ತಾಲೂಕು ಕಾರ್ಯಾಧ್ಯಕ್ಷ ಜಿ.ಎ.ರವೀಂದ್ರ, ಅಧ್ಯಕ್ಷ ಎಸ್.ಮಹೇಶ್, ಕುಂದಾಣ ಹೋಬಳಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್, ನಾಗರತ್ನಮ್ಮ, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ರಾಮಣ್ಣ, ಹಿರಿಯ ಮುಖಂಡ ಗುರಪ್ಪ, ಲಯನ್ಸ್ ಅಧ್ಯಕ್ಷ ಎಸ್.ಶಂಕರ್, ಮಾಜಿ ಅಧ್ಯಕ್ಷರಾದ ವೈ.ಸಿ.ಕೃಪಾಕರ್, ಶ್ರೀರಾಮಯ್ಯ, ಎಸ್ಆರ್ಎಸ್ ಸತೀಶ್, ಲಕ್ಷಿ$್ಮನಾರಾಯಣ, ವಿ.ಗೋಪಾಲ್ ಇತರರು ಇದ್ದರು.