ಚಿತ್ತಾಪುರ ತಾಲೂಕಿನ ಗುಂಡಗುರ್ತಿಯ ಲುಂಬಿನಿ ಉದ್ಯಾನವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಅರಣ್ಯ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಶ್ರೀ ಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು.
- ವಿಜಯಕುಮಾರ ಬಡಿಗೇರ ಅನಿಸಿಕೆ
- ಗುಂಡಗುರ್ತಿಯಲ್ಲಿ ಜಾಗೃತಿ ಕಾರ್ಯಕ್ರಮ
ಚಿತ್ತಾಪುರ : ಅರಣ್ಯಗಳು ಕೇವಲ ಪರಿಸರವಲ್ಲ, ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿವೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ವಿಜಯಕುಮಾರ ಬಡಿಗೇರ ಹೇಳಿದರು.
ಗುಂಡಗುರ್ತಿಯ ಲುಂಬಿನಿ ಉದ್ಯಾನನವನದಲ್ಲಿ ಅರಣ್ಯ ಇಲಾಖೆ ಪ್ರಾದೇಶಿಕ ಅರಣ್ಯ ವಲಯ, ಕಲಬುರಗಿಯ ಶ್ರೀ ಹಿಂಗುಲಾಂಬಿಕಾ ಎಜುಕೇಷನ್ ಸೊಸೈಟಿಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ವಿಶ್ವ ಅರಣ್ಯ ದಿನದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಅರಣ್ಯ ಮತ್ತು ಆರ್ಥಿಕತೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರಣ್ಯ ಸಂಪತ್ತಿನ ಮಹತ್ವವನ್ನು ಜನರಿಗೆ ತಿಳಿಸುವುದು ಅಗತ್ಯವಾಗಿದೆ. ಪರಿಸರ ಸಮತೋಲನಕ್ಕಾಗಿ ಅರಣ್ಯಗಳು ಭೂಮಿಯ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತವೆ. ನಮಗೆ ಬೇಕಾದ ಶುದ್ಧ ಗಾಳಿ, ನೀರು, ಆಹಾರ ಮತ್ತು ಔಷಧೀಯ ಸಸ್ಯಗಳನ್ನು ಅರಣ್ಯ ನೀಡುತ್ತವೆ ಎಂದರು.
ಶ್ರೀ ಹಿಂಗುಲಾಂಬಿಕಾ ಎಜುಕೇಷನ್ ಸೊಸೈಟಿಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯ ಡಾ. ನಿರ್ಮಲಾ ಮಾತನಾಡಿ, ಆಯುರ್ವೇದ ಮತ್ತು ಆಧುನಿಕ ವೈದ್ಯಕಿಯ ೇತ್ರದಲ್ಲಿ ಅರಣ್ಯಗಳ ಆರ್ಥಿಕ ಮೌಲ್ಯ ಅಪಾರವಾಗಿದೆ. ಅರಣ್ಯ ಔಷಧೀಯ ಸಸ್ಯಗಳ ೇತ್ರವಾಗಿದ್ದು, ಇದರ ಸೌಲಭ್ಯ ವಿಶ್ವಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳಾದ ವಿಶ್ವನಾಥ, ಅನಿಲ, ಶ್ರೀಕಾಂತ, ನಾಗೇಶ, ಜಾಫರ್, ಸಿದ್ದು ಇತರರಿದ್ದರು.