ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಪಂಚಾಚಾರ್ಯರ ಯುಗಮಾನೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀಶೈಲ ಜಗದ್ಗುರು, ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಶ್ರೀ ವಿಜಯಮಹಾಂತೇಶ್ವರ ಶಿವಾಚಾರ್ಯ, ಶ್ರೀ ಶಿವಕುಮಾರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಉಪಮನ್ಯು ಶಿವಾಚಾರ್ಯ ಇತರರಿದ್ದರು. 
ರಾಜ್ಯ

ಗುರು-ವಿರಕ್ತರು ಒಗ್ಗಟ್ಟಾಗಿ ಸಮಾಜದ ಸಂಘಟನೆಗೆ ಶ್ರಮಿಸಲಿ

ಪ್ರಮುಖ ಮುಖ್ಯಾಂಶಗಳು

  • ಶ್ರೀಶೈಲ ಜಗದ್ಗುರುಗಳು ನುಡಿ
  • ಬೊಮ್ಮನಳ್ಳಿಯಲ್ಲಿ ಪಂಚಾಚಾರ್ಯರ ಯುಗಮಾನೋತ್ಸವ
ಚಿಂಚೋಳಿ: ದೇಶದಲ್ಲಿ ಗುರು&ವಿರಕ್ತ ಪರಂಪರೆ ಹಾಗೂ ಸಿದ್ಧಾಂತ ಶಿಖಾಮಣಿ&ವಚನ ಸಾಹಿತ್ಯ ಒಂದೇ ಎಂಬುದು ಅರಿತು ಸಮಾಜದ ಸಂಟನೆಗೆ ಮುಂದಾಗಬೇಕು ಎಂದು ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಕರೆ ನೀಡಿದರು.
ಬೊಮ್ಮನಳ್ಳಿಯ ಶ್ರೀ ರೇವಣಸಿದ್ಧೇಶ್ವರ (ಪಾದಗಟ್ಟಿ) ದೇವಾಲಯದಲ್ಲಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಪ್ರತಿ ವರ್ಷವು ಶ್ರದ್ಧೆ, ಭಕ್ತಿಯಿಂದ ಜಯಂತಿ ಆಚರಿಸಲಾಗುತ್ತಿದೆ. ಈ ಬಾರಿ ಯುಗಮಾನೋತ್ಸವ ಹಾಗೂ ಬಸವ ಜಯಂತಿ ಏಕಕಾಲಕ್ಕೆ ಆಚರಿಸಿ ಗುರು&ವಿರಕ್ತರು ಒಂದೇ ಎಂಬ ಸಂದೇಶ ಸಾರಿರುವುದು ಖುಷಿ ತಂದಿದೆ ಎಂದರು.
ನಾಡಿನಲ್ಲಿ ಕೆಲವರು ಗುರು&ವಿರಕ್ತರ ಮಧ್ಯೆ ಬಿರುಕು ಮೂಡಿಸುವ ಕಾರ್ಯ ಮಾಡುತ್ತಿದ್ದು, ಯಾರು ಕಿವಿಗೊಡದೆ ಒಂದಾಗಿ ಸಮಾಜದಲ್ಲಿ ಸಂಟಿತರಾಗಬೇಕು. ಈ ಭಾಗದಲ್ಲಿ ಪಾಠ ಶಾಲೆ, ಗೋ ಶಾಲೆ, ಗುರುಕುಲ ಸ್ಥಾಪಿಸುವ ಮೂಲಕ ಸಂಸ್ಕಾರ, ಸಂಸತಿ ಉಳಿಸಿ&ಬೆಳೆಸುವ ಕಾರ್ಯವಾಗಬೇಕು. ನಿತ್ಯ ನಿರಂತರವಾಗಿ ಇಂತಹ ಕಾರ್ಯಗಳು ನಡೆಯುತ್ತಿರಲಿ, ಶ್ರೀಶೈಲ ಮಲ್ಲಿಕಾರ್ಜುನನ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿದೆ ಎಂದು ತಿಳಿಸಿದರು.
ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಶ್ರೀ ವಿಜಯಮಹಾಂತೇಶ್ವರ ಶಿವಾಚಾರ್ಯ, ಶ್ರೀ ಶಿವಕುಮಾರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಉಪಮನ್ಯು ಶಿವಾಚಾರ್ಯ, ಶ್ರೀ ಸಿದ್ದರಾಮಯ್ಯ ಸ್ವಾಮೀಜಿ, ಶ್ರೀ ಪ್ರಭುದೇವರು ಖಟ್ವಾಂಗೇಶ್ವರ, ಬಿಕೆ ವಿಜಯಲ್ಮ ಸಮ್ಮುಖ ವಹಿಸಿದ್ದರು.
ಮಾಜಿ ಸಂಸದ ಡಾ.ಉಮೇಶ ಜಾಧವ್​, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಪ್ರಮುಖರಾದ ಬಾಬುರಾವ ಪಾಟೀಲ್​, ಅನೀಕುಮಾರ ಜಮಾದಾರ, ದೀಪಕನಾಗ ಪುಣ್ಯಶೆಟ್ಟಿ, ಗುಂಡೇರಾವ ಮುಡಬಿ, ಶರಣಪ್ಪ ಪಾಟೀಲ್​ ಮೋತಕಪಳ್ಳಿ, ಮುಕುಂದ ದೇಶಪಾಂಡೆ, ಶೈಲೇಶ ಹುಲಿ, ಸುರೇಶ ದೇಶಪಾಂಡೆ, ಬಸಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ, ವೀರಣ್ಣ ಗಂಗಾಣಿ, ಶಿವಕುಮಾರ ಸ್ವಾಮಿ, ಮಹಾಂತಯ್ಯ ಸ್ವಾಮಿ ಇತರರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಶರಣಪ್ಪ ಯಲಾಲ್​, ಗುರುಪಾದ ಸ್ವಾಮಿ, ವೆಂಕಟರಾಮರೆಡ್ಡಿ, ಡಾ. ಶಿವರಾಜ ಸಜ್ಜನಶೆಟ್ಟಿ, ಡಾ. ಬಸವೇಶ ಪಾಟೀಲ್​, ರಾಜಶೇಖರ ನಿಪ್ಪಾಣಿ, ರಾಜೇಂದ್ರ ಪಾಟೀಲ್​ ಅವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ಕೋಟ್​)ರೇವಗ್ಗಿಯಲ್ಲಿ ನೆಲೆಸಿರುವ ಶ್ರೀ ರೇವಣಸಿದ್ಧೇಶ್ವರರ ಜಯಂತಿಯನ್ನು ನಮ್ಮ ತಂದೆಯವರು ಅಂದಿನ ಕಾಲದಲ್ಲಿಯೇ ಶ್ರದ್ಧೆ&ಭಕ್ತಿಯಿಂದ ಆಚರಿಸಿದ್ದರು. ರೇವಣಸಿದ್ದೇಶ್ವರರು ಬಂಜಾರ ಸಮಾಜದ ಆರಾಧ್ಯ ದೈವವಾಗಿದ್ದು, ನನ್ನ ಅವಧಿಯಲ್ಲಿ ದೇಗುಲದ ಪ್ರಗತಿಗೆ ಶ್ರಮಿಸಿದ್ದೇನೆ. ಇದೀಗ ಪ್ರಾಧಿಕಾರ ರಚನೆಗಾಗಿ ಸ್ಥಳಿಯ ಶಾಸಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

— > ಡಾ.ಉಮೇಶ ಜಾಧವ್​, ಮಾಜಿ ಸಂಸದ

"

ಶ್ರೀಶೈಲ ಜಗದ್ಗುರುಗಳು ಕರೊನಾ ವೇಳೆ ಚಿನ್ನವನ್ನು ದಾನ ಮಾಡಿ ಭಕ್ತರನ್ನು ಉದ್ಧರಿಸಿದ್ದಾರೆ. ಶ್ರೀ ರೇವಣಸಿದ್ಧೇಶ್ವರರ ಪಾದಗದ್ದುಗೆಯಲ್ಲಿ ಧರ್ಮದ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಭಕ್ತರು ಸಹಕರಿಸಬೇಕು. ಗುರು ವಿರಕ್ತರು, ಪಂಚಾಚಾರ್ಯರು ಒಗ್ಗೂಡಿ ಮುಂದೆ ಸಾಗಬೇಕಿದೆ.

— > ರಾಜಕುಮಾರ ಪಾಟೀಲ್​ ತೆಲ್ಕೂರ, ಮಾಜಿ ಶಾಸಕ