ಮಾಲಿನ್ಯರಹಿತ ಪರಿಸರ ನಿಮಾರ್ಣ ಗುರಿಯಾಗಲಿ environment 
ರಾಜ್ಯ

ಮಾಲಿನ್ಯರಹಿತ ಪರಿಸರ ನಿಮಾರ್ಣ ಗುರಿಯಾಗಲಿ environment

ಪಾತಪಾಳ್ಯ: ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಒದಗಿಸಬೇಕಾದ್ದರಿಂದ ಮಾಲಿನ್ಯ ರಹಿತ ಪರಿಸರ ನಿಮಾರ್ಣ ನಮ್ಮೆಲ್ಲರ ಗುರಿಯಾಗಬೇಕು ಎಂದು ಪ್ರಾಂಶುಪಾಲ ಬಿ.ಎಸ್​.ಪ್ರಸನ್ನ ತಿಳಿಸಿದರು.environment
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಆಮ್ಲಜನಕ ಬದುಕಿನ ಒಂದು ಮೂಲ. ಅದು ಇಲ್ಲದೆ ಬದುಕುವುದು ಅಸಾಧ್ಯ. ಹಾಗಾಗಿ ಎಲ್ಲರಿಗೂ ಉತ್ತಮ ಪ್ರಾಣವಾಯು ದೊರಕುವಂತಾಗಲು ಹೆಚ್ಚೆಚ್ಚು ಗಿಡ ನೆಟ್ಟು ಬೆಳೆಸುವುದು ಎಲ್ಲರ ಆದ್ಯತೆಯಾಗಬೇಕು ಎಂದರು.
ಉಪನ್ಯಾಸಕ ಇಸ್ಮಾಯಿಲ್​ ಮಾತನಾಡಿ, ಮನುಷ್ಯ ಆಡಂಬರದ ಜೀವನಕ್ಕೆ ಮಾರಿಹೋಗಿದ್ದಾನೆ. ಇದರ ಗುಂಗಿನಲ್ಲಿ ತಾನು ಏನು ಮಾಡುತ್ತಿದ್ದಾನೆ ಎಂಬುದರ ಅರಿವೇ ಇಲ್ಲದಂತಾಗಿದೆ. ತನ್ನ ಅಗತ್ಯತೆ ಹಾಗೂ ತಾನು ಮಾಡಿದ ತಪ್ಪಿಗೆ ಶಿಕ್ಷೆ, ಪಶ್ಚಾತಾಪ ಪಡಬೇಕಾದ ಕಾಲ ಸನ್ನಿಹಿತವಾಗುತ್ತಿದ್ದು, ಅದಕ್ಕೂ ಮುನ್ನವೇ ತಪ್ಪನ್ನು ತಿದ್ದುಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಮನುಷ್ಯ ಆಡಂಬರದ ಬದುಕಿಗೆ ಅಂತ್ಯ ಹಾಡಿ, ಪರಿಸರದ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದರು.
ಉಪನ್ಯಾಸಕಿ ವಿ.ನಿರ್ಮಲಾ ಮಾತನಾಡಿ, ಪರಿಸರದಲ್ಲಾಗುತ್ತಿರುವ ಎಲ್ಲ ರೀತಿಯ ದುಷ್ಪರಿಣಾಮಗಳಿಗೆ ಮನುಷ್ಯನ ಆಸೆ, ದುರಾಸೆ ಹಾಗೂ ಅಗತ್ಯತೆಗಳೇ ಕಾರಣವಾಗಿದ್ದು, ಇವುಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.