Let the five projects reach the deserving beneficiaries. 
ರಾಜ್ಯ

ಪಂಚ ಯೋಜನೆಗಳು ಅರ್ಹ ಲಾನುಭವಿಗಳಿಗೆ ತಲುಪಲಿ

ಮಧುಗಿರಿ: ಸರ್ಕಾರದ ಮಹತ್ವಾಕಾಂಕ್ಷೆಪಂಚ ಗ್ಯಾರಂಟಿ ಯೋಜನೆಗಳ ನಾಮಫಲಕಗಳನ್ನು ಬಸ್ ನಿಲ್ದಾಣ, ಗ್ರಾಪಂ ಕಚೇರಿ, ವಿಎಸ್‌ಎಸ್‌ಎನ್ ಮುಂಭಾಗದಲ್ಲಿ ಅಳವಡಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚೌಡಪ್ಪ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ವಾತನಾಡಿ, ತಾಲೂಕಿನಲ್ಲಿ ಯುವನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮುಂದಿನ ಸಭೆ ವೇಳೆಗೆ ಒದಗಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಒದಗಿಸಿಲ್ಲ ಎಂದು ಅಸವಾಧಾನ ವ್ಯಕ್ತಪಡಿಸಿದರು.
ಗೃಹಲಕ್ಷ್ಮೀ ಯೋಜನೆಯನ್ನು ಸದ್ಬಳಕೆ ವಾಡಿಕೊಂಡ ಯಶೋಗಾಥೆ ಹೊಂದಿರುವ ಮಹಿಳೆಯರನ್ನು ಗುರುತಿಸುವಂತೆ ಸಿಡಿಪಿಒ ಕುವಾರ ನಾಯ್ಕ ಅವರಿಗೆ ಸೂಚಿಸಿದರು. ೆಬ್ರವರಿಯಲ್ಲಿ ಇಂದಿರಾ ಕಿಟ್ ಯೋಜನೆ ಪ್ರಾರಂಭವಾಗಲಿದ್ದು, ಪಂಚ ಗ್ಯಾರಂಟಿ ಯೋಜನೆಯ ತೆಗೆ ಇಂದಿರಾ ಕಿಟ್ ಯೋಜನೆಯನ್ನು ಹೆಚ್ಚು ಪ್ರಚಾರ ವಾಡಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 22,23,249 ಕ್ವಿಂಟಾಲ್ ಅಕ್ಕಿ ಸರಬರಾಜಾಗುತ್ತಿದೆ. ಅದೇ ರೀತಿ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮಧುಗಿರಿ ತಾಲೂಕಿನಲ್ಲಿ 300 ಕೋಟಿ ರೂ. ಹೆಣ್ಣು ಮಕ್ಕಳ ಖಾತೆಗೆ ಸಂದಾಯವಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ 1,85,58,921 ಮಹಿಳೆಯರು ಪ್ರಯಾಣಿಸಿದ್ದು, ಅದರ ಬಾಬ್ತು 5,38,59,026 ಹಣ ಸರ್ಕಾರ ಸಂದಾಯ ವಾಡಿದೆ ಎಂದರು.
ಯೋಜನಾ ನಿರ್ದೇಶಕ ಧನಂಜಯ ವಾತನಾಡಿ, ಆಹಾರ ಇಲಾಖೆ ತ್ವರಿತಗತಿಯಲ್ಲಿ ರೇಷನ್ ಕಾರ್ಡ್ ಒದಗಿಸಬೇಕು. ಯಾವುದೇ ಯೋಜನೆ ಪಡೆಯಲು ರೇಷನ್ ಕಾರ್ಡ್ ಅವಶ್ಯಕತೆ ಹೆಚ್ಚಿದೆ. ಹಾಗಾಗಿ ವಿಳಂಬ ವಾಡದೆ ರೇಷನ್ ಕಾರ್ಡ್ ಒದಗಿಸಬೇಕು ಎಂದು ಸೂಚಿಸಿದರು.
ಸಿಡಿಪಿಒ ಕುವಾರ ನಾಯ್ಕ ವಾತನಾಡಿ, ಗೃಹಲಕ್ಷ್ಮೀ ಯೋಜನೆ ವಿಳಂಬವಾಗಲು ಬ್ಯಾಂಕುಗಳ ಸಮಸ್ಯೆ ಇದ್ದು, ಬ್ಯಾಂಕ್ ಮುಖ್ಯಸ್ಥರ ಸಭೆ ನಡೆಸಬೇಕು ಎಂದರು.