ಬಂಗಾರಪೇಟೆ ತಹಸೀಲ್ದಾರ್ ಕಚೇರಿ ಮುಂದೆ ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಬಿಜೆಪಿ ಸರ್ಕಾರದ Farmers ವಿರುದ್ಧ ಪ್ರತಿಭಟಿಸಿದರು.
- ಉಪ ತಹಸೀಲ್ದಾರ್ ಗಾಯತ್ರಿಗೆ ಮನವಿ
ಬಂಗಾರಪೇಟೆ: ಮುಂಗಾರು ಅತಿವೃಷ್ಟಿಯಿಂದಾಗಿ ನಷ್ಟಕೊಳಗಾದ ರೈತರಿಗೆ Farmers ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ನಿಯಮಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ಬಿಡುಗಡೆಯಾಗಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿ, ಉಪ ತಹಸೀಲ್ದಾರ್ ಗಾಯತ್ರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಹುಣಸಿನಹಳ್ಳಿ ಶ್ರೀನಿವಾಸ್ ಮಾತನಾಡಿ, ಸರ್ಕಾರ ಬೆಂಬಲ ಬೆಲೆ ನೀಡಿ ರೈತರು ಬೆಳೆದಿರುವ ಬೆಳೆ ಖರೀದಿಸಬೇಕು. ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವ ರಾಜ್ಯದ 24 ಲ ಕುಟುಂಬಗಳು ಪಶು ಆಹಾರದ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಕಾಂಗ್ರೆಸ್ 2023ರಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ೂಷಿಸಿದಂತೆ ಪ್ರತಿ ಲೀಟರ್ಗೆ ಪೋತ್ಸಾಹ ಧನವನ್ನು 5ರಿಂದ 7ರೂ.ವರೆಗೆ ಹೆಚ್ಚಿಸಬೇಕು. ಬಾಕಿ ಉಳಿಸಿಕೊಂಡಿರುವ 620 ಕೋಟಿ ರೂ.ಪೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರಿಗೆ ನೀಡುತ್ತಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಸಂಪರ್ಕ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ನಿಲ್ಲಿಸಿದ್ದು, ಪುನ ಪ್ರಾರಂಭಿಸಬೇಕು ಎಂದರು.
ಕಾವೇರಿ ಮತ್ತು ಕೃಷ್ಣಾ ಜಲಾಶಯ ಪ್ರದೇಶದ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮಹಾದಾಯಿ, ಕಳಸಾ ಬಂಡೂರಿ, ಅಪ್ಪರ್ ಭದ್ರಾ ಮೇಲ್ದಂಡೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮುಖ್ಯ ಕಾಲುವೆ, ಟನಲ್ಗಳ ರಿಪೇರಿ ಮಾಡಬೇಕು. ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ತನ್ನ ಪುಣಾಳಿಕೆಯಲ್ಲಿ ೂಷಿಸಿದಂತೆ ಪ್ರತಿವರ್ಷ 30 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಬಿಜೆಪಿ ಅಧಿಕಾರವಧಿಯಲ್ಲಿದ್ದಾಗ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಬೊಕ್ಕಸದಿಂದ 4 ಸಾವಿರ ರೂ. ಕೊಡುತ್ತಿತ್ತು. ಇದನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿಲ್ಲಿಸಿದ್ದು, ಕೂಡಲೆ ರೈತರಿಗೆ 4 ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಹುಣಸಿನಹಳ್ಳಿ ಶ್ರೀನಿವಾಸ್, ಬಿಜೆಪಿ ತಾಲೂಕು ಅಧ್ಯ ಸಂಪಂಗಿರೆಡ್ಡಿ, ಮುಖಂಡರಾದ ಹನುಮಪ್ಪ, ಶಶಿ ಆಚಾರಿ, ಕೋಟ್ರಾಮಗುಳ್ಳ ಸೀತಾರಮ್, ನಾಗೇಶ್, ಮಹೇಶ್, ಪ್ರತಾಪ್ ಇದ್ದರು.