ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲಿ mainstream of society 
ರಾಜ್ಯ

ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲಿ mainstream of society

ಪ್ರಮುಖ ಮುಖ್ಯಾಂಶಗಳು

  • ಚಿಕ್ಕಅಂಕಂಡಾಹಳ್ಳಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಎಚ್​.ಎಂ ರವಿ ಹೇಳಿಕೆ
ಬಂಗಾರಪೇಟೆ: ಅಂಗವಿಕಲರು ತಮ್ಮ ನ್ಯೂನತೆಗಳನ್ನು ಮರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಾಗೂ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದು ಚಿಕ್ಕಅಂಕಂಡಾಹಳ್ಳಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಎಚ್​.ಎಂ ರವಿ ತಿಳಿಸಿದರು. mainstream of society
ತಾಲೂಕಿನ ಚಿಕ್ಕ ಅಂಕಂಡಾಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್​ ಹಾಗೂ ಇತರ ಪರಿಕರಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರಿ ಸಾಧನೆಗೆ ಅಂಗವೈಪಲ್ಯ ಅಡ್ಡಿಯಾಗಬಾರದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್​ ಅವರ ಕಾರ್ಯವೈಖರಿ ಉತ್ತಮವಾಗಿದ್ದು, 15ನೇ ಹಣಕಾಸು ಯೋಜನೆಯ ಶೇ.5ರ ಅನುದಾನದಲ್ಲಿ ಅಂಗವಿಕಲರಿಗೆ ಸೈಕಲ್​ ಹಾಗೂ ಇತರ ಪರಿಕರಗಳನ್ನು ನೀಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಿ ಸರ್ವೇ ಸದಸ್ಯರ ಸಹಕಾರದೊಂದಿಗೆ ಅನುಮೋದನೆ ಪಡೆಯಲಾಯಿತ್ತು ಎಂದರು.
ಗ್ರಾಪಂ ಅಧ್ಯಕ್ಷ ಗಿರಿಜಮ್ಮ ಶ್ರೀನಿವಾಸ್​ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗುತ್ತಿಗೆದಾರರು ಸಾಲ ಮಾಡಿ ಬಡ್ಡಿಗೆ ಹಣ ತಂದು ಸರ್ಕಾರದ ನಿಯಮದಂತೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ, ಆದರೆ ಇದುವರೆಗೂ 15ನೇ ಹಣಕಾಸು, ಸಪ್ಲೇ ಬಿಲ್​ ಒಳಗೊಂಡಂತೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಆದರಿಂದ ಸರ್ಕಾರ ಎಚ್ಚೆತ್ತುಕೊಂಡು ಬಾಕಿಯಿರುವ ಅನುದಾನದ ಬಿಲ್​ಗಳನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಸದಸ್ಯರಾದ ನಗೀನ್​ ತಾಜ್​, ಎಸ್​ ರಾಧಾ, ಲಕ್ಷಮ್ಮ, ಈರಮ್ಮ, ಲಕ್ಷಿದೇವಮ್ಮ, ನಯಾಜ್​ ಪಾಷಾ, ಸುರೇಶ್​, ಭಾಗ್ಯಮ್ಮ, ಸಾವಿತ್ರಮ್ಮ, ವೆಂಕಟೇಶ್​ ಗೌಡ ಇದ್ದರು.