ವಿಜಯಪುರದ ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್​ ಗೌಡ ಚಾಲನೆ ನೀಡಿದರು. ಟೌನ್​ ಬಿಜೆಪಿ ಅಧ್ಯಕ್ಷ ವೆಂಕಟೇಶ್​ ಪ್ರಭು ಮತ್ತಿತರರು ಇದ್ದರು. 
ರಾಜ್ಯ

ಅರ್ಹರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗದಿರಲಿ / VIJAYAPUR

ವಿಜಯಪುರ : ಕೇಂದ್ರ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅನೇಕ ಬಾರಿ ಜನರಿಗೆ ಇದರ ಸರಿಯಾದ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್​ ಗೌಡ ತಿಳಿಸಿದರು.
ಪಟ್ಟಣದ ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಬೇಕು ಮತ್ತು ಮಾಹಿತಿಯ ಕೊರತೆಯಿಂದ ಯಾರೂ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದರು.
ಟೌನ್​ ಬಿಜೆಪಿ ಅಧ್ಯಕ್ಷ ವೆಂಕಟೇಶ್​ ಪ್ರಭು ಮಾತನಾಡಿ, ಪ್ರಧಾನಮಂತ್ರಿ ಆವಾಸ್​ ಯೋಜನೆ, ಆಯುಷ್ಮಾನ್​ ಭಾರತ, ಪಿಎಂ ಕಿಸಾನ್​, ಜನಧನ್​ ಯೋಜನೆ, ಉಜ್ವಲಾ ಯೋಜನೆ, ಮುದ್ರಾ ಮತ್ತು ವಿಶ್ವಕರ್ಮ ಯೋಜನೆಗಳಂತಹ ಮಹತ್ವದ ಕಾರ್ಯಕ್ರಮಗಳ ಪ್ರಯೋಜನವನ್ನು ಜನರು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಸಾರ್ವಜನಿಕರ ಸಂದೇಹಗಳನ್ನು ನಿವಾರಿಸಲಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಯೋಜನೆಗಳ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಯಿತು.ಪುರಸಭೆ ಮಾಜಿ ಸದಸ್ಯ ವರದರಾಜು, ಮುಖಂಡರಾದ ಚಂದ್ರಶೇಖರ್​, ಮುನಿಕೃಷ್ಣ, ರಾವ, ಪ್ರಕಾಶ್​, ಪ್ರಭು, ದಿನೇಶ್​, ನಟರಾಜ್​, ಸುಬ್ಬಣ್ಣ, ವೀಣಾ, ತಾಯಮ್ಮ, ಪ್ರೇಮ, ಭಾಗ್ಯಮ್ಮ ಇದ್ದರು.