ನುಗು ಜಲಾಶಯದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್.ಡಿ.ಸಣ್ಣಸ್ವಾಮಿ, ರಾಜಶೇಖರ್, ಗೋಪಾಲ್, ಸೋಮೇಶ್ ನೇರಳೆ ಇತರರಿದ್ದರು. 
ರಾಜ್ಯ

ಮಹನೀಯರ ಆಶಯದಂತೆ ದಸಂಸ ಕಾರ್ಯ ನಿರ್ವಹಿಸಲಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ ಬಣ) ತಾಲೂಕು ಪದಾಧಿಕಾರಿಗಳ ಆಯ್ಕೆ
  • ನುಗು ಜಲಾಶಯದ ಪ್ರವಾಸಿ ಮಂದಿರ
ಸರಗೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ ಬಣ) ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಜತೆಗೆ ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ನುಗು ಜಲಾಶಯದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮೈಸೂರು ವಿಭಾಗದ ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಚಾಲಕರಾಗಿ ಗೋಪಾಲಕೃಷ್ಣ ಬಿಡುಗಲು, ತಾಲೂಕು ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕರಾಗಿ ಸೋಮೇಶ್ ನೇರಳೆ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿಭಾಗದ ಸಂಚಾಲಕರಾಗಿ ಮಲ್ಲಿಕಾರ್ಜುನ ಉಯ್ಯಂಬಳ್ಳಿ, ತಾಲೂಕು ಸಾಂಸ್ಕೃತಿಕ ಸಂಘಟನಾ ಸಂಚಾಲಕರಾಗಿ ಚೆನ್ನಯ್ಯ ಕಾಳೇಗೌಡನ ಹುಂಡಿ ಹಾಗೂ ಖಜಾಂಚಿಯಾಗಿ ಶಾಂತಿಪುರ ಗೋಪಾಲ್ ಅವರನ್ನು ಆಯ್ಕೆ ಮಾಡಲಾಯಿತು.
ಪಟ್ಟಣ ಪಂಚಾಯಿತಿ ಶಾಖೆಯ ಟೌನ್ ಸಂಚಾಲಕರಾಗಿ ಎಸ್.ಎಂ.ಕಾರಯ್ಯ, ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕರಾಗಿ ವಿಜಯ್‌ಕುಮಾರ್, ಹಿಂದುಳಿದ ಹಾಗೂ ಪೌರಕಾರ್ಮಿಕ ವಿಭಾಗದ ಸಂಚಾಲಕರಾಗಿ ಶಿವಮೂರ್ತಿ, ಅಸಂಘಟಿತ ಮತ್ತು ಪೌರಕಾರ್ಮಿಕ ವಿಭಾಗದ ಸಂಚಾಲಕರಾಗಿ ಆನಂದ್, ಖಜಾಂಚಿಯಾಗಿ ಪ್ರವೀಣ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಂದರ್ ಆಯ್ಕೆಯಾದರು.
ತಾಲೂಕು ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕ ಸೋಮೇಶ್ ನೇರಳೆ ಮಾತನಾಡಿ, ದಲಿತ ಸಂಘರ್ಷ ಸಮಿತಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆಶಯದಂತೆ ಕಾರ್ಯ ನಿರ್ವಹಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಸಮಿತಿಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲೂ ಸಂಘಟನೆಯನ್ನು ವಿಸ್ತರಿಸಿ, ದಲಿತರು ಹಾಗೂ ಶೋಷಿತ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಹಿರಿಯ ಮುಖಂಡ ಮಲ್ಲಿಕಾರ್ಜುನ ಉಯ್ಯಂಬಳ್ಳಿ, ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ, ತಾಲೂಕು ಸಂಚಾಲಕ ಗೋಪಾಲಕೃಷ್ಣ ಇತರರಿದ್ದರು.